×
Ad

ಶಾಲೆಯ ಬಳಿ ಮದ್ಯ ಮಾರಾಟ ಬಗ್ಗೆ ದೂರು ನೀಡಿದ್ದಕ್ಕೆ ಅಂಧ ಯುವಕನಿಗೆ ಥಳಿಸಿದ ಪೊಲೀಸರು: ಆರೋಪ

Update: 2022-03-21 18:49 IST

ಚೆನ್ನೈ: ಅಂಧ ಯುವಕನೊಬ್ಬನಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಮೂವರು ತಮಿಳುನಾಡು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದ ಕೆಲವೇ ದಿನಗಳಲ್ಲಿ ಸಂತ್ರಸ್ತ ಯುವಕ ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ವಿವರಿಸುವ ವೀಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಸಂತ್ರಸ್ತ ಯುವಕ, 29 ವರ್ಷದ ಶಂಕರ್ ಕವರಪಟ್ಟಿ ಗ್ರಾಮದವನಾಗಿದ್ದಾನೆ

ವಿರಲಿಮಲೈ ಪುಡುಕೊಟ್ಟೈ ಜಿಲ್ಲೆಯಲ್ಲಿ ಶಾಲೆಯೊಂದರ ಸಮೀಪ ಮದ್ಯ ಮಾರಾಟದ ವಿರುದ್ಧ ದೂರು ನೀಡಿದ್ದಕ್ಕೆ ಆತನಿಗೆ ಪೊಲೀಸರು ಕಿರುಕುಳ ನೀಡಿದ್ದರೆನ್ನಲಾಗಿದ್ದು ಈ ಸಂಬಂಧ ಮಾರ್ಚ್ 17ರಂದು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಶಂಕರ್ ಆಸ್ಪತ್ರೆಯಲ್ಲಿದ್ದು ಅಲ್ಲಿ ತೆಗೆಯಲಾಗಿರುವ ವೀಡಿಯೋದಲ್ಲಿ ಆತ ತನ್ನ ಮೇಲಾಗಿರುವ ದೌರ್ಜನ್ಯವನ್ನು ವಿವರಿಸಿದ್ದಾನೆ. ತನ್ನನ್ನು  ವಿರಲಿಮಲೈ ಠಾಣೆಗೆ ಒಯ್ದು ಥಳಿಸಿ ಮರವೊಂದಕ್ಕೆ ಕಟ್ಟಿ ಹಾಕಿ ಥಳಿಸಲಾಗಿತ್ತು. ನಾನು ಸಂಪೂರ್ಣ ಅಂಧ ವ್ಯಕ್ತಿ ನಾನು ಕೇಳಿಸಿಕೊಂಡಂತೆ ಮೂವರು ಪುರುಷರು ಹಾಗೂ ಒಬ್ಬ ಮಹಿಳೆ ನನ್ನ ಮೇಲೆ ಹಲ್ಲೆಗೈದಿದ್ದಾರೆ. ಮದ್ಯ ಮಾರಾಟದ ವಿರುದ್ಧ ದೂರು ನೀಡಲು  ನೀನು ಯಾರು ನಿನಗೆ ಮದ್ಯ ಮಾರಾಟ ಮಾಡಬೇಕೆಂದಿದ್ದರೆ ಮಾಡು ಎಂದು ಪೊಲೀಸರು ಹೇಳಿದ್ದರು ಎಂದು ಆತ ಹೇಳಿದ್ದಾನೆ.

ತನಗೆ ಕೆಲ ಶಾಲಾ ಮಕ್ಕಳು ಮಾಹಿತಿ ನೀಡಿ ಕೆಲ ಇತರ ಮಕ್ಕಳಿಗೆ ಮದ್ಯ ಮಾರಾಟ ಮಾಡಲು ಬಲವಂತಪಡಿಸಲಾಗುತ್ತಿದೆ ಎಂದು ತಿಳಿಸಿದ್ದರು ಎಂದೂ ಶಂಕರ್ ಹೇಳಿಕೊಂಡಿದ್ದಾನೆ.

ಘಟನೆಯ ಬಗ್ಗೆ ಹಿರಿಯಾಧಿಕಾರಿಗಳಿಂದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News