ಹೊಳೆಗೆ ಬಿದ್ದು ಮಹಿಳೆ ಮೃತ್ಯು
Update: 2022-03-23 21:21 IST
ಬೈಂದೂರು : ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಮಾ.22ರಂದು ಬೆಳಗ್ಗೆ ಪಡುವರಿ ಗ್ರಾಮದ ಸಣ್ಣ ಬೆಸ್ಕೂರು ಎಂಬಲ್ಲಿ ನಡೆದಿದೆ.
ಮೃತರನ್ನು ತಾರಾಪತಿ ಸಣ್ಣ ಬೆಸ್ಕೂರು ನಿವಾಸಿ ಕಸ್ತೂರಿ ದೇವಾಡಿಗ(58) ಎಂದು ಗುರುತಿಸಲಾಗಿದೆ. ಇವರು ಮೇವು ಹುಲ್ಲನ್ನು ತಲೆಯ ಮೇಲೆ ಹೊತ್ತು ಕೊಂಡು ಮನೆ ಕಡೆ ಬರುತ್ತಿದ್ದಾಗ ದನಗಳು ಹಾಯುವುದನ್ನು ತಪ್ಪಿಸಲು ಕಸ್ತೂರಿ ದೇವಾಡಿಗ ರಸ್ತೆಯ ಬದಿಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಸುಮನಾ ಹೊಳೆಗೆ ಬಿದ್ದು ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.