ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಮಂಡಿಸಿದ ನಿರ್ಣಯಕ್ಕೆ ಸೋಲು

Update: 2022-03-24 03:29 GMT
Photo: PTI

ವಿಶ್ವಸಂಸ್ಥೆ: ಉಕ್ರೇನ್‍(Ukraine)ನಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಆಪಾದಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ(Russia) ಮಂಡಿಸಿದ ನಿರ್ಣಯಕ್ಕೆ ಸೋಲಾಗಿದೆ. 

ಈ ಸಂಬಂಧದ ಮತದಾನದಿಂದ ಭಾರತ ದೂರ ಉಳಿದಿದ್ದು, ರಷ್ಯಾ ಮತ್ತು ಚೀನಾ ಮಾತ್ರ ನಿರ್ಣಯದ ಪರವಾಗಿ ಮತ ಚಲಾಯಿಸಿವೆ.

ಯುದ್ಧಪೀಡಿತ ಉಕ್ರೇನ್‌ ನಲ್ಲಿ ಮಾನವೀಯತೆ ಬಿಕ್ಕಟ್ಟು ಉಂಟಾಗಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ನಿರ್ಣಯ ಮಂಡಿಸಿತು. ಈ ನಿರ್ಣಯ ಅಂಗೀಕಾರವಾಗಲು ರಷ್ಯಾ ಪರವಾಗಿ 9 ದೇಶಗಳು ಮತ ಹಾಕುವ ಅಗತ್ಯವಿತ್ತು. ರಷ್ಯಾ ಪರವಾಗಿ ಚೀನಾ ಮತ ಚಲಾವಣೆ ಮಾಡಿದರೆ, ಭಾರತ ಸೇರಿದಂತೆ 12 ರಾಷ್ಟ್ರಗಳು ತಟಸ್ಥ ಧೋರಣೆ ಅನುಸರಿಸಿದೆ. ಇದರಿಂದ ರಷ್ಯಾ ನಿರ್ಣಯಕ್ಕೆ ಸೋಲಾಗಿದೆ.

ಈ ನಿರ್ಣಯದ ವಿರುದ್ಧ ಯಾವ ದೇಶಗಳು ಮತ ಚಲಾಯಿಸಿಲ್ಲ. ಈ ನಿರ್ಣಯದಲ್ಲಿ ರಷ್ಯಾದ ಆಕ್ರಮಣದ ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಇತರ ದೇಶಗಳು ನಿರ್ಣಯದ ಬಗೆಗೆ ಬಳಿಕ ಹೇಳಿಕೆ ನೀಡಿದರೆ ಭಾರತ ಈ ಸಂಬಂಧ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದಕ್ಕೂ ಮುನ್ನ, ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ಸಂಬಂಧಿಸಿದಂತೆ ಭಾರತ ಭದ್ರತಾ ಮಂಡಳಿಯ ಮತದಾನದಿಂದ ಎರಡು ಬಾರಿ ಮತ್ತು ಸಾಮಾನ್ಯಸಭೆಯಲ್ಲಿ ಒಂದು ಬಾರಿ ದೂರ ಉಳಿದಿದೆ.

ಈ ನಡುವೆ ರಷ್ಯಾ ಪಡೆಗಳು ಉಕ್ರೇನ್‌ನ ಪ್ರಮುಖ ನಗರಗಳ ಮೇಲಿನ ದಾಳಿಯನ್ನು ಮಂದುವೆರಸಿದ್ದು, ಬಂದರು ನಗರ ಮರಿಯುಪೊಲ್‌ ಮೇಲೆ ನಿರಂತರ ಬಾಂಬ್‌ ಮತ್ತು ಶೆಲ್‌ ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ಇಂದಿನಿಂದ ಖಾಸಗಿ ಬಸ್ಸು ಮಾಲಕರ ಅನಿರ್ಧಿಷ್ಟಾವಧಿ ಮುಷ್ಕರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News