×
Ad

ಮಣಿಪಾಲ: ವಿಶ್ವ ಕ್ಷಯರೋಗ ದಿನಾಚಣೆ, ಕಲಾಕೃತಿ ಅನಾವರಣ

Update: 2022-03-24 19:02 IST

ಮಣಿಪಾಲ, ಮಾ.24: ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗ, ಮ್ಯಾಕ್ ಐಡಿ, ಹಾಗೂ ಪಿಎಸ್‌ಪಿಎಚ್ ಮಾಹೆ ಮಣಿಪಾಲದ ವತಿಯಿಂದ ಕ್ಷಯ ರೋಗದ ಕುರಿತು ಜಾಗೃತಿ ಕಲಾಕೃತಿ ಅನಾವರಣ ಗುರುವಾರ ನಡೆಯಿತು.

ಸಮುದಾಯ ವೈದ್ಯಕೀಯ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ ಹಾಗೂ 2019ರ ವೈದ್ಯಕೀಯ ವಿದ್ಯಾರ್ಥಿಗಳು ರಚಿಸಿದ ಕ್ಷಯರೋಗ ಜಾಗೃತಿ ಕಲಾಕೃತಿಯನ್ನು ಕೆಎಂಸಿಯ ಡೀನ್ ಡಾ ಶರತ್ ರಾವ್ ಹಾಗೂ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಪ್ರಶಾಂತ್ ಭಟ್ ಅನಾವರಣಗೊಳಿಸಿದರು.

ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆಯ ನೋಡಲ್ ಅಧಿಕಾರಿ ಡಾ.ಅಶ್ವಿನಿ ಕುಮಾರ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ ಇದರ ವೈದ್ಯಾಧಿಕಾರಿ ಡಾ.ಶಾಮಿನಿ, ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಮುರಳೀಧರ ಕುಲಕರ್ಣಿ, ಡಾ.ರಂಜಿತಾ ಶೆಟ್ಟಿ, ಡಾ.ಚೈತ್ರಾ ರಾವ್, ಡಾ.ಸ್ನೇಹ ಮಲ್ಯ, ಸಹಾಯಕ ಪ್ರಾಧ್ಯಾಪಕರಾದ ಡಾ.ಈಶ್ವರಿ, ಡಾ.ಅಖಿಲಾ, ಡಾ. ಅಫ್ರೋಝ್ ಮತ್ತಿತರರು ಉಪಸ್ಥಿತರಿದ್ದರು.

ಡಾ.ಸಂಜಯ್ ಕಿಣಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟಕರಾದ ಡಾ.ದಿವ್ಯಾ ಪೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News