×
Ad

ಹಿರಿಯ ಕಾಂಗ್ರೆಸ್ ನಾಯಕ ತಾಲೆಕುನ್ನಿಲ್ ಬಶೀರ್ ನಿಧನ

Update: 2022-03-25 11:47 IST
ತಾಲೆಕುನ್ನಿಲ್ ಬಶೀರ್ (Photo: Twitter/@MukulWasnik)

ತಿರುವನಂತಪುರ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಹಾಗೂ ಸಂಸದ ತಾಲೆಕುನ್ನಿಲ್ ಬಶೀರ್ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಬಶೀರ್ ಅವರಿಗೆ 79 ವರ್ಷ ವಯಸ್ಸಾಗಿತ್ತು.

"ಬಶೀರ್ ಅವರು ಶುಕ್ರವಾರ ಮುಂಜಾನೆ ವೆಂಬಯಂನಲ್ಲಿರುವ ಅವರ ನಿವಾಸದಲ್ಲಿ ನಮ್ಮನ್ನು ಅಗಲಿದ್ದಾರೆ" ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ.

ಹಿರಿಯ ನಾಯಕ ಬಶೀರ್ ಕಳೆದ ಐದು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಟಿ. ಬಶೀರ್ ಅವರು ಚಿರಯನ್ ಕೀಲು ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು 1977 ರಲ್ಲಿ ಕಳಕ್ಕೂಟ್ಟಂ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು.ಆದರೆ ನಂತರ ಹಿರಿಯ ನಾಯಕ ಎ. ಕೆ. ಆಂಟನಿ ಅವರು ಅಲ್ಲಿಂದ ಸ್ಪರ್ಧಿಸಲು ಅನುವು ಮಾಡಿಕೊಡಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News