×
Ad

ಮಾ.27ರಿಂದ ಬೋಂದೆಲ್ ಲಾಫ್ಟರ್ ಕ್ಲಬ್ ಪುನರಾರಂಭ

Update: 2022-03-25 15:56 IST

ಮಂಗಳೂರು, ಮಾ.25: ಕೋವಿಡ್ ಹಾವಳಿಯಿದಾಗಿ ಕಳೆದೆರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಬೋಂದೆಲ್ ಲಾಫ್ಟರ್ ಕ್ಲಬ್ ಚಟುವಟಿಕೆ ಮಾ.27ರಿಂದ ಪುನರಾರಂಭಗೊಳ್ಳಲಿದೆ.

ಮಾ.27ರಂದು ಬೆಳಗ್ಗೆ 8 ಗಂಟೆಗೆ ಬೋಂದೆಲ್‍ನ ಗುಂಡು ರಾವ್ ರಸ್ತೆಯ, ಹೌಸಿಂಗ್ ಬೋರ್ಡ್ ಮೈದಾನದಲ್ಲಿ ಬೋಂದೆಲ್ ಚರ್ಚಿನ ಧರ್ಮಗುರು ವಂ.ಆ್ಯಂಡ್ರೂ ಲಿಯೊ ಡಿಸೋಜ ಲಾಫ್ಟರ್ ಕ್ಲಬ್ ಗೆ ಚಾಲನೆ ನೀಡಲಿದ್ದಾರೆ. ಲಾಫ್ಟರ್ ಕ್ಲಬ್ ಸೆಶನ್ 25 ನಿಮಿಷಗಳ ವರೆಗೆ ನಡೆಯಲಿದೆ.
ಬೋಂದೆಲ್ ನಿವಾಸಿ, ಬರಹಗಾರ ಹಾಗೂ ಪತ್ರಕರ್ತ ಜಾನ್ ಬಿ. ಮೊಂತೇರೊ ಈ ಲಾಫ್ಟರ್ ಕ್ಲಬ್ ನ್ನು 2002 ರಲ್ಲಿ ಆರಂಭಿಸಿದ್ದರು. ಕಳೆದ 20 ವರ್ಷಗಳಿಂದ ನಡೆದು ಬಂದ ಲಾಫ್ಟರ್ ಕ್ಲಬ್ ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿತ್ತು. ಯಾವುದೇ ಶಿಕ್ಷಣ ಸಂಸ್ಥೆಗಳು ಅಥವಾ ಇನ್ನಿತರ ಸಂಘ-ಸಂಸ್ಥೆಗಳು ಲಾಫ್ಟರ್ ಕ್ಲಬ್ ನ್ನು ಆರಂಭಿಸುವುದಿದ್ದಲ್ಲಿ, ಉಚಿತವಾಗಿ ಆರಂಭಿಸಲು ಬೋಂದೆಲ್ ಲಾಫ್ಟರ್ ಕ್ಲಬ್ ಸಂಸ್ಥಾಪಕ ಜೊನ್ ಬಿ. ಮೊಂತೇರೊ (ಮೊ.ಸಂ. 9886276608) ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News