ಅಖಿಲ ಭಾರತ ಮುಷ್ಕರಕ್ಕೆ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಬೆಂಬಲ
Update: 2022-03-25 18:46 IST
ಕುಂದಾಪುರ, ಮಾ.25: ಇದೇ ಮಾ.28-29ರಂದು ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಮುಷ್ಕರಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರಕಾರದ ಅನುದಾನ ಕಡಿತ, ಕೂಲಿಕಾರರಿಗೆ ಕಲ್ಯಾಣ ಮಂಡಳಿ ರಚನೆ, ನರೇಗಾ ಕೂಲಿಕಾರರಿಗೆ ದಿನಗೂಲಿ 600 ರೂ.ಗೆ ಹೆಚ್ಚಳ, ವಾರ್ಷಿಕ 200 ದಿನಗಳ ಕೆಲಸ, ನಗರ ಪ್ರದೇಶಕ್ಕೆ ವಿಸ್ತರಣೆ, ಕಾಯಕ ಬಂಧುಗಳಿಗೆ ನಿಯಮಾನುಸಾರ ಕೊಡಬೇಕಾದ ಪ್ರೋತ್ಸಾಹ ಧನ ಬಿಡುಗಡೆ, ಮನೆ, ನಿವೇಶನ ಸ್ಥಳ ಮಂಜೂರಾತಿ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಮುಷ್ಕರದ ಅಂಗವಾಗಿ, ಬೈಂದೂರು ತಹಶೀಲ್ದಾರ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಲ್ಲಿ ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.