×
Ad

ನ್ಯಾಯಾಧೀಶರ ಹತ್ಯೆ ಪ್ರಕರಣ: ವಾಟ್ಸ್ ಆ್ಯಪ್ ಮುಖ್ಯಸ್ಥರನ್ನು ಆರೋಪಿಯನ್ನಾಗಿಸಲು ಹೈಕೋರ್ಟ್ ಆದೇಶ

Update: 2022-03-26 13:38 IST

ಹೊಸದಿಲ್ಲಿ: ಕಳೆದ ವರ್ಷ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ನ ಮುಖ್ಯಸ್ಥರನ್ನು ಆರೋಪಿಯನ್ನಾಗಿ ಮಾಡುವಂತೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಸಿಬಿಐಗೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಾ.ರವಿ ರಂಜನ್ ಹಾಗೂ  ನ್ಯಾಯಮೂರ್ತಿ ಸುಜಿತ್ ನಾರಾಯಣ ಪ್ರಸಾದ್ ಅವರನ್ನೊಳಗೊಂಡ  ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ವ್ಯಾಟ್ಸ್ ಆ್ಯಪ್ ಮುಖ್ಯಸ್ಥರನ್ನು ಆರೋಪಿಯನ್ನಾಗಿ ಮಾಡುವಂತೆ ಸಿಬಿಐಯನ್ನು ಕೇಳಿದೆ ಹಾಗೂ  ಫೇಸ್‌ಬುಕ್ ಮಾಲಿಕತ್ವದ ಕಂಪನಿಗೆ ನೋಟಿಸ್ ನೀಡಿದೆ.

ಪ್ರಕರಣದಲ್ಲಿ ಬಂಧಿಸಲಾದ ಇಬ್ಬರು ಆರೋಪಿಗಳ ವ್ಯಾಟ್ಸ್ ಆ್ಯಪ್  ಚಾಟ್ ವಿವರಗಳನ್ನು ವ್ಯಾಟ್ಸ್ ಆ್ಯಪ್  ಕಂಪೆನಿಯಿಂದ ಕೋರಲಾಗಿತ್ತು. ಆದರೆ  ವ್ಯಾಟ್ಸ್ ಆ್ಯಪ್  ಪ್ರಮುಖರು ಭದ್ರತೆ ಹಾಗೂ  ಗೌಪ್ಯತೆ ನೀತಿಗಳನ್ನು ಉಲ್ಲೇಖಿಸಿ ವಿವರ ನೀಡಲು ನಿರಾಕರಿಸಿದರು ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ನ್ಯಾಯಾಧೀಶರ ನಿಧನದ ನಂತರ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಆರಂಭಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನುನ್ಯಾಯಪೀಠ ನಡೆಸಿತು.

ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್( 49 ವರ್ಷ) ಅವರು ಜುಲೈ 28, 2021 ರಂದು ಜಾಗಿಂಗ್ ಮಾಡಲು ಹೊರಟಿದ್ದಾಗ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News