×
Ad

ಹಿಜಾಬ್ ವಿವಾದದ ಕುರಿತ ಪ್ರಶ್ನೆ: ಹುಡುಗಿಯರನ್ನು ಗುರಿಯಾಗಿಸುವುದನ್ನು ನಿಲ್ಲಿಸಿ ಎಂದ ವಿಶ್ವ ಸುಂದರಿ ಹರ್ನಾಜ್ ಕೌರ್

Update: 2022-03-27 00:02 IST
Photo: Twitter/@zoo_bear

ಹೊಸದಿಲ್ಲಿ: ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಕರ್ನಾಟಕದ ಹಿಜಾಬ್ ನಿಷೇಧದ ಕುರಿತಂತೆ ಪತ್ರಕರ್ತ ಕೇಳಿದ ಪ್ರಶ್ನೆಗೆ ನೀಡಿದ ಉತ್ತರ ಈಗ ವೈರಲ್‌ ಆಗುತ್ತಿದೆ. 

ಹಿಜಾಬ್‌ ವಿವಾದ ಕುರಿತು ಅಭಿಪ್ರಾಯ ಹೇಳುವಂತೆ ಒತ್ತಾಯಿಸಿದ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಕೌರ್‌, ಎಲ್ಲ ವಿಚಾರಗಳಲ್ಲಿ ಮಹಿಳೆಯರನ್ನು ಗುರಿಯಾಗಿಸಲಾಗುತ್ತಿದೆ. ಈಗ ನೀವೂ (ವರದಿಗಾರ) ನನ್ನನ್ನು ಗುರಿಯಾಗಿಸುತ್ತಿದ್ದೀರʼ ಎಂದು ಹೇಳಿದ್ದಾರೆ.

ಆರಂಭದಲ್ಲಿ ಪತ್ರಕರ್ತನ ಪ್ರಶ್ನೆಗೆ ಉತ್ತರಿಸುವ ಮೊದಲು ಹರ್ನಾಜ್ ಕಾರ್ಯಕ್ರಮದ ನಿರೂಪಕನ ಕಡೆಗೆ ತಿರುಗಿದರು, ಈ ವೇಳೆ ಮಧ್ಯಪ್ರವೇಶಿಸಿದ ನಿರೂಪಕ, ರಾಜಕೀಯ ಸಮಸ್ಯೆಗಳನ್ನು ಬಿಟ್ಟು, ಹರ್ನಾಜ್ ಅವರ ಬಗ್ಗೆ ಪ್ರಶ್ನೆಗಳನ್ನು ಕೇಂದ್ರೀಕರಿಸುವಂತೆ ಮಾಧ್ಯಮದವರನ್ನು ವಿನಂತಿಸಿದರು.

ಆದರೆ, ಪತ್ರಕರ್ತ ಪಟ್ಟು ಬಿಡದಿದ್ದಾಗ ಉತ್ತರಿಸಿದ ಕೌರ್‌, ಎಲ್ಲ ವಿಚಾರಗಳಲ್ಲಿ ಹುಡುಗಿಯರನ್ನು ಗುರಿ ಮಾಡಲಾಗುತ್ತಿದೆ. ಹುಡುಗಿಯರನ್ನು ಗುರಿ ಮಾಡುವುದು ನಿಲ್ಲಿಸಿ ಎಂದಿದ್ದಾರೆ. 

“ನೀವು ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದೀರಿ. ಅವಳು ತನ್ನ ಜೀವನವನ್ನು ಬಯಸಿದಂತೆ ಬದುಕಲು ಬಿಡಿ. ಅವಳನ್ನು ಹಾರಲು ಬಿಡಿ. ಅವಳ ರೆಕ್ಕೆಗಳನ್ನು ಕತ್ತರಿಸಬೇಡಿ. ನೀವು ರೆಕ್ಕೆಗಳನ್ನು ಕತ್ತರಿಸಲು ಬಯಸಿದರೆ, ನಿಮ್ಮದನ್ನು ಕತ್ತರಿಸಿ" ಎಂದು ಅವರು ಪ್ರತಿಕ್ರಿಯಿಸಿದ್ದಾರೆ. 

ಕೌರ್ ಉತ್ತರವನ್ನು ಸಭಿಕರು ಜೋರಾದ ಚಪ್ಪಾಳೆ ಮೂಲಕ ಅಭಿನಂದಿಸಿದ್ದಾರೆ. ಮಿಸ್ ಯೂನಿವರ್ಸ್ ಸ್ಪರ್ಧಿಯಾಗಿ ಪ್ರಶಸ್ತಿಯನ್ನು ಗೆಲ್ಲುವ ತನ್ನ ಪ್ರಯಾಣದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News