ಮಹಿಳಾ ಕ್ರಿಕೆಟ್ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೀರೋಚಿತ ಸೋಲು

Update: 2022-03-27 08:48 GMT
Photo:twitter

ಕ್ರೈಸ್ಟ್ ಚರ್ಚ್:  ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ ಗೆಲ್ಲಲೇಬೇಕಾದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್ ಗಳ ಅಂತರದಿಂದ ವೀರೋಚಿತ ಸೋಲುಂಡಿದೆ. ಈ ಸೋಲಿನೊಂದಿಗೆ ಭಾರತದ ಸೆಮಿ ಫೈನಲ್ ಕನಸು ಬಹುತೇಕ ಭಗ್ನವಾಗಿದೆ.

ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ನಿಗದಿತ 50  ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ.

ಗೆಲ್ಲಲು 275 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸಿದೆ.  ಆಫ್ರಿಕಾವು 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾದ ಪರ ಲೌರ ವಾಲ್ವಾರ್ಟ್ (80 ರನ್) ಹಾಗೂ ಮಿಗೊನ್ ಡು ಪ್ರೀಝ್(52)ಅರ್ಧಶತಕ ಗಳಿಸಿದ್ದಾರೆ. ಭಾರತದ ಪರ ರಾಜೇಶ್ವರಿ ಗಾಯಕ್ವಾಡ್(2-61)ಹಾಗೂ ಹರ್ಮನ್ ಪ್ರೀತ್ ಕೌರ್(2-42)ತಲಾ 2 ವಿಕೆಟ್ ಪಡೆದರು.

ಭಾರತದ ಬ್ಯಾಟಿಂಗ್ ನಲ್ಲಿ ಸ್ಮೃತಿ ಮಂಧಾನ(71), ನಾಯಕಿ ಮಿಥಾಲಿ ರಾಜ್(68) ಹಾಗೂ ಶೆಫಾಲಿ ವರ್ಮಾ (53)ಅರ್ಧಶತಕ ಸಿಡಿಸಿ  ಭಾರತವು 7 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಲು ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News