×
Ad

ಐಪಿಎಲ್: ಪ್ಲೆಸಿಸ್ ಅಬ್ಬರ, ಆರ್‌ಸಿಬಿ 205/2

Update: 2022-03-27 21:22 IST
ವಿರಾಟ್ ಕೊಹ್ಲಿ, Photo:twitter

ನವಿಮುಂಬೈ, ಮಾ.27: ನಾಯಕ ಹಾಗೂ ಆರಂಭಿಕ ಬ್ಯಾಟರ್ ಎಫ್‌ಡು ಪ್ಲೆಸಿಸ್(88 ರನ್,57 ಎಸೆತ, 3 ಬೌಂಡರಿ,7 ಸಿಕ್ಸರ್), ಮಾಜಿ ನಾಯಕ ವಿರಾಟ್ ಕೊಹ್ಲಿ(ಔಟಾಗದೆ 41,29 ಎಸೆತ,1 ಬೌಂ., 2 ಸಿ.)ಹಾಗೂ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್(ಔಟಾಗದೆ 32,14 ಎಸೆತ, 3 ಬೌಂ, 3 ಸಿ.) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ)ತಂಡ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್‌ನ 3ನೇ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿದೆ.

ರವಿವಾರ ಡಿ.ವೈ .ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್ ಆರ್‌ಸಿಬಿಯನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಅನುಜ್ ರಾವತ್(21 ರನ್)ಜೊತೆಗೆ ಇನಿಂಗ್ಸ್ ಆರಂಭಿಸಿದ ಪ್ಲೆಸಿಸ್ ಮೊದಲ ವಿಕೆಟ್‌ನಲ್ಲಿ 7 ಓವರ್‌ಗಳಲ್ಲಿ 50 ರನ್ ಸೇರಿಸಿ ಆರ್‌ಸಿಬಿಗೆ ಉತ್ತಮ ಆರಂಭ ಒದಗಿಸಿದರು.

ರಾವತ್ ಔಟಾದ ಬಳಿಕ ಕೊಹ್ಲಿ ಜೊತೆಗೆ ಕೈಜೋಡಿಸಿದ ಪ್ಲೆಸಿಸ್ 2ನೇ ವಿಕೆಟಿಗೆ 118 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಪ್ಲೆಸಿಸ್ 88 ರನ್‌ಗೆ ಔಟಾಗಿ ಶತಕದಿಂದ ವಂಚಿತರಾದ ನಂತರ ಜೊತೆಯಾದ ಕೊಹ್ಲಿ ಹಾಗೂ ಕಾರ್ತಿಕ್ 3ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 37 ರನ್ ಸೇರಿಸಿ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು.

ಪಂಜಾಬ್ ಪರ ಆರು ಬೌಲರ್‌ಗಳು ದಾಳಿಗಿಳಿದರೂ ಆರ್‌ಸಿಬಿಯನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಅರ್ಷದೀಪ್ ಸಿಂಗ್(1-31) ಹಾಗೂ ರಾಹುಲ್ ಚಹಾರ್(1-22)ತಲಾ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News