ವಿದ್ಯುತ್ ಕಂಬಕ್ಕೆ ಬಡಿದ ಸ್ಪೈಸ್ ಜೆಟ್ ವಿಮಾನ; ಅಪಾಯದಿಂದ ಪಾರಾದ ಪ್ರಯಾಣಿಕರು

Update: 2022-03-28 13:17 GMT
Photo: ndtv.com

ಹೊಸದಿಲ್ಲಿ: ಜಮ್ಮುವಿಗೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನವು ವಿದ್ಯುತ್‌ ಲೈಟ್‌ ಕಂಭಕ್ಕೆ ಢಿಕ್ಕಿ ಹೊಡೆದ ಘಟನೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. 

ಪ್ರಯಾಣಿಕರ ಟರ್ಮಿನಲ್‌ ನಿಂದ ರನ್‌ವೇಗೆ ಹೋಗಲು ಪುಶ್‌ಬ್ಯಾಕ್‌ ನಡೆಸುವ ವೇಳೆ ಬೋಯಿಂಗ್‌ 737-800 ವಿಮಾನದ ರೆಕ್ಕೆಯು ಕಂಭಕ್ಕೆ ತಾಗಿದೆ. ಇದರಿಂದ ಕಂಭ ಹಾಗೂ ವಿಮಾನದ ರೆಕ್ಕೆ ಹಾನಿಗೊಂಡಿದೆ ಎಂದು ಮೂಲಗಳನ್ನುಲ್ಲೇಖಿಸಿ ndtv.com ವರದಿ ಮಾಡಿದೆ.  

ಸದ್ಯ, ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಮತ್ತು ಎಲ್ಲಾ ಪ್ರಯಾಣಿಕರನ್ನು ಬೇರೊಂದು ವಿಮಾನದಲ್ಲಿ ಕಳುಹಿಸಲಾಯಿತು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News