ಬೈಡನ್ ಹೇಳಿಕೆ ಆತಂಕಕಾರಿ: ರಶ್ಯ ಪ್ರತಿಕ್ರಿಯೆ

Update: 2022-03-28 18:20 GMT

ಮಾಸ್ಕೊ, ಮಾ.28: ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಅಮೆರಿಕದ ಅಧ್ಯಕ್ಷ ಬೈಡನ್ ಕಸಾಯಿ(ಕಟುಕ) ಎಂದು ಕರದಿರುವುದು ತೀವ್ರ ಆತಂಕಕಾರಿಯಾಗಿದೆ ಎಂದು ರಶ್ಯ ಸೋಮವಾರ ಪ್ರತಿಕ್ರಿಯಿಸಿದೆ.

 ಈ ಹೇಳಿಕೆ ಖಂಡಿತಾ ತೀವ್ರ ಆತಂಕಕಾರಿಯಾಗಿದೆ. ಅಮೆರಿಕದ ಅಧ್ಯಕ್ಷರ ಹೇಳಿಕೆಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಶನಿವಾರ ಪೋಲ್ಯಾಂಡ್‌ಗೆ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮದರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಬೈಡನ್, ಪುಟಿನ್ ಓರ್ವ ಕಸಾಯಿ . ಅವರು ಅಧಿಕಾರದಲ್ಲಿರಬಾರದು ಎಂದಿದ್ದರು. ಆ ಬಳಿಕ ಇದಕ್ಕೆ ಸ್ಪಷ್ಟನೆ ನೀಡಿದ್ದ ಶ್ವೇತಭವನ, ರಶ್ಯದಲ್ಲಿ ಸರಕಾರ ಬದಲಾಗಬೇಕೆಂಬ ಗುರಿಯನ್ನು ಅಮೆರಿಕ ಹೊಂದಿಲ್ಲ ಎಂದಿತ್ತು. ಬೈಡನ್ ಬಳಸಿರುವ ಪದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ತರುತ್ತದೆ ಎಂದು ರಶ್ಯದ ಅಧ್ಯಕ್ಷರ ಕಚೇರಿ ಪ್ರತಿಕಿಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News