ಯುದ್ಧವೀರರ ವೀಡಿಯೊಗಳಿಗೆ ‘ಆಸ್ಕರ್’ ಪ್ರಶಸ್ತಿ ಘೋಷಿಸಿದ ಉಕ್ರೇನ್

Update: 2022-03-29 18:38 GMT
photo pti

ಕೀವ್, ಮಾ.29: ರಶ್ಯದೊಂದಿಗೆ ಒಂದು ತಿಂಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದ ವೈರಲ್ ವೀಡಿಯೊಗಳ ಪಟ್ಟಿಯನ್ನು ಉಕ್ರೇನ್ ನ ರಕ್ಷಣಾ ಇಲಾಖೆ ಬಿಡುಗಡೆಗೊಳಿಸಿದ್ದು ಇವುಗಳಿಗೆ ವಿವಿಧ ವಿಭಾಗಗಳಡಿ ಪ್ರಶಸ್ತಿಯನ್ನು ಘೋಷಿಸಿದೆ.

ಅತ್ಯುತ್ತಮ ಸಿನಿಮಾ ಛಾಯಾಗ್ರಹಣ ವಿಭಾಗದಡಿ ರಶ್ಯದ ಹೆಲಿಕಾಪ್ಟರ್ ಅನ್ನು ಸ್ಟ್ರಿಂಜರ್ ಕ್ಷಿಪಣಿ ಧ್ವಂಸಗೊಳಿಸುವ ವೀಡಿಯೊ ದೃಶ್ಯಕ್ಕೆ ಪುರಸ್ಕಾರ ಸಂದಿದೆ. ಹಾನಿಗೊಳಗಾದ ರಶ್ಯದ ಸೇನಾ ವಾಹನವನ್ನು ಟ್ರ್ಯಾಕ್ಟರ್ ಮೇಲೇರಿಸಿಕೊಂಡು ಸಾಗಿಸುವ ವೀಡಿಯೊಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಘೋಷಿಸಲಾಗಿದೆ. 

ಸ್ನೇಕ್ ಐಲ್ಯಾಂಡ್(ಹಾವಿನ ದ್ವೀಪ)ವನ್ನು ರಕ್ಷಿಸಿಕೊಳ್ಳುವಲ್ಲಿ ಉಕ್ರೇನ್ನ ಯೋಧ ತೋರಿದ ಧೈರ್ಯದ ವೀಡಿಯೊಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ಉಕ್ರೇನ್ನ 2ನೇ ಬೃಹತ್ ನಗರ ಖಾರ್ಕಿವ್ ನಲ್ಲಿ ನಿರ್ಮಿಸಲಾಗಿರುವ ಬಾಂಬ್ ಶೆಲ್ಟರ್(ಬಾಂಬ್ ನಿಂದ ರಕ್ಷಿಸಿಕೊಳ್ಳುವ ಶಿಬಿರ)ದಲ್ಲಿ ನೆಲೆಸಿದ್ದ ನಾಗರಿಕರ ತಂಡವೊಂದು ಹಾಡಿದ ಗಾಯನಕ್ಕೆ ಅತ್ಯುತ್ತಮ ಹಾಡು ಎಂಬ ಪ್ರಶಸ್ತಿ ಘೋಷಿಸಲಾಗಿದೆ.

ದೇಶದ ಮೂಲಸೌಕರ್ಯ ಮತ್ತು ವಸತಿ ಪ್ರದೇಶಗಳನ್ನು ಪೂರ್ಣವಾಗಿ ನಾಶಗೊಳಿಸುವ ಪ್ರಯತ್ನದ ಅಂಗವಾಗಿ ರಶ್ಯ ಕ್ಷಿಪಣಿ ಮತ್ತು ಬಾಂಬ್ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಮಂಗಳವಾರ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News