×
Ad

ಕಾಂಗ್ರೆಸ್ ಮುಕ್ತ ಭಾರತ ಯಾರಿಂದಲೂ ಸಾಧ್ಯವಿಲ್ಲ : ಮುಹಮ್ಮದ್ ಹಾರಿಸ್ ನಲಪಾಡ್

Update: 2022-03-30 16:06 IST

ಮಂಗಳೂರು : ದೇಶದ ಸೌಹಾರ್ದತೆಗೆ ಮಹತ್ವದ ಕೊಡುಗೆ ನೀಡಿದ ಕಾಂಗ್ರೆಸ್ ಮುಕ್ತ ಭಾರತ ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಹಾರಿಸ್ ನಲಪಾಡ್ ತಿಳಿಸಿದ್ದಾರೆ.

ನಗರದ ಬೆಂದೂರ್ ವೆಲ್ ನ ಸೈಂಟ್ ಸೆಬಾಸ್ಟಿನ್ ಸಭಾಂಗಣದಲ್ಲಿಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಯುವ ಜಾಗೃತಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿ ಬಲಿದಾನ ನೀಡಿರುವ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕಿದೆ. ಪಕ್ಷದ ಬಲವರ್ಧನೆಗೆ ಸದಸ್ಯರ ಬಲ ಹೆಚ್ಚಿಸಲು ಕರೆ ನೀಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡುತ್ತಾ, ಪಕ್ಷದ ಯುವಕರಿಗೆ ನಾಯಕತ್ವ ವಹಿಸಲು ಹಿರಿಯರು ಅವಕಾಶ ನೀಡಬೇಕು ಕಾಂಗ್ರೆಸ್ ನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ ಎಂದರು.

ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡುತ್ತಾ, ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳು ಸಮಾಜವನ್ನು ಒಡೆಯುತ್ತಿರುವಾಗ ಬಾಬಾ ಸಾಹೇಬರ ನೇತೃತ್ವದ ಸಂವಿಧಾನದ ಮೇಲೆ ನಂಬಿಕೆ ಇಟ್ಟು ಹೋರಾಡಬೇಕಾಗಿದೆ ಎಂದರು.

ಬಿಜೆಪಿ ಈ ಸಮಾಜವನ್ನು ಒಡೆಯುತ್ತಿದ್ದರೆ, ಕಾಂಗ್ರೆಸ್ ಸಮಾಜವನ್ನು ಒಂದು ಗೂಡಿಸಲು ಶ್ರಮಿಸುತ್ತಿದೆ. ಈ ಕಾರ್ಯಕ್ಕೆ ಯುವ ಸಮುದಾಯ ಒಂದಾಗಬೇಕಾಗಿದೆ ಎಂದರು.

ಸಮಾರಂಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಅನಿಲ್ ಕುಮಾರ್ ಯಾದವ್, ವಿದ್ಯಾ ಬಾಲಕೃಷ್ಣನ್, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಮೊಯ್ದಿನ್ ಬಾವ,‌ ಐವನ್ ಡಿಸೋಜ, ಮಿಥುನ್ ರೈ, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ನವೀನ್ ಡಿಸೋಜಾ, ಶಾಲೆಟ್ ಪಿಂಟೋ, ಅಶ್ರಫ್ ಬಜಾಲ್, ಸುರೇಂದ್ರ ಕಂಬಳಿ, ಪ್ರಕಾಶ್ ಸಾಲ್ಯಾನ್, ಉಮೇಶ್ ದಂಡಕೇರಿ, ಸಲೀಂ, ಪ್ರವೀಣ್ ಚಂದ್ರ ಆಳ್ವ, ಮುಹಮ್ಮದ್ ಕುಂಜತ್ತಬೈಲ್, ಶಾಹುಲ್ ಹಮೀದ್, ಮೆರಿಲ್ ರೇಗೋ, ಗಿರೀಶ್ ಶೆಟ್ಟಿ, ಜೋಕಿಂ ಶುಭೋದಯ ಆಳ್ವ, ಲಾರೆನ್ಸ್, ಸುಹೈಲ್ ಕಂದಕ್, ಸರ್ಫ್ರಾಝ್ ನವಾಝ್, ಆಶಿತ್,‌ ಮುಹಮ್ಮದ್ ಸಿರಾಜ್, ರಾಕೇಶ್ ದೇವಾಡಿಗ, ಸುನಿಲ್ ಪೂಜಾರಿ, ಮುಹಮ್ಮದ್ ಮುಫೇದ್, ಜೈಸನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News