72 ರಾಜ್ಯಸಭಾ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ವಿದಾಯ
ಹೊಸದಿಲ್ಲಿ: ತಮ್ಮ ಸ್ಥಾನಗಳಿಂದ ನಿವೃತ್ತರಾದ 72 ರಾಜ್ಯಸಭಾ ಸಂಸದರಿಗೆ ಗುರುವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದಾಯ ಹೇಳಿದರು. ಸಂಸತ್ತಿನ ಸದಸ್ಯರ ಅನುಭವವು ಶೈಕ್ಷಣಿಕ ಜ್ಞಾನಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ ಎಂದು ಪ್ರಧಾನಿ ಹೇಳಿದರು.
“ನಮ್ಮ ರಾಜ್ಯಸಭಾ ಸದಸ್ಯರಿಗೆ ಸಾಕಷ್ಟು ಅನುಭವವಿದೆ. ಕೆಲವೊಮ್ಮೆ ಅನುಭವವು ಶೈಕ್ಷಣಿಕ ಜ್ಞಾನಕ್ಕಿಂತ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ. ನಿವೃತ್ತಿಯಾಗುವ ಸದಸ್ಯರಿಗೆ ಮತ್ತೊಮ್ಮೆ ಬನ್ನಿ ಎಂದು ನಾವು ಹೇಳುತ್ತೇವೆ’’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂಸದರ ಕೊಡುಗೆಗಳ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ನಾವು ಈ ಸಂಸತ್ತಿನಲ್ಲಿ ಬಹಳ ಸಮಯ ಕಳೆದಿದ್ದೇವೆ. ಈ ಸದನವು ನಮ್ಮ ಜೀವನಕ್ಕೆ ಸಾಕಷ್ಟು ಕೊಡುಗೆ ನೀಡಿದೆ, ನಾವು ಅದಕ್ಕೆ ಕೊಡುಗೆ ನೀಡಿದ್ದೇವೆ. ಈ ಸದನದ ಸದಸ್ಯರಾಗಿ ಸಂಗ್ರಹಿಸಿದ ಅನುಭವವನ್ನು ದೇಶದ ನಾಲ್ಕೂ ದಿಕ್ಕುಗಳಿಗೆ ಕೊಂಡೊಯ್ಯಬೇಕು’’ ಎಂದರು.
ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಪ್ರಮುಖ ಸದಸ್ಯರೆಂದರೆ: ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯಲ್, ಪಿ.ಚಿದಂಬರಂ, ಪ್ರಫುಲ್ ಪಟೇಲ್, ಸಂಜಯ್ ರಾವತ್, ಸುಬ್ರಮಣಿಯನ್ ಸ್ವಾಮಿ, ರೂಪಾ ಗಂಗುಲಿ, ಎಂ.ಸಿ. ಮೇರಿಕೋಮ್, ಎಂ.ಜೆ. ಅಕ್ಬರ್.