×
Ad

ಮ-ನರೇಗಾ ಬಜೆಟ್ ಹಂಚಿಕೆಯಲ್ಲಿ ನಿರಂತರ ಕಡಿತ: ಸೋನಿಯಾ ಗಾಂಧಿ ವಿಷಾದ

Update: 2022-03-31 13:52 IST

ಹೊಸದಿಲ್ಲಿ: ಕೊರೋನ ಹಾಗೂ ಲಾಕ್ ಡೌನ್ ಸಮಯದಲ್ಲಿ ಕೋಟ್ಯಂತರ ಬಾಧಿತ ಬಡವರಿಗೆ ನೆರವಾಗಿದ್ದ ಮ-ನರೇಗಾಕ್ಕೆ ಬಜೆಟ್ ಹಂಚಿಕೆಯಲ್ಲಿ ನಿರಂತರವಾದ ಕಡಿತದ ಕುರಿತು  ಕಾಂಗ್ರೆಸ್ ಮುಖ್ಯಸ್ಥ ಸೋನಿಯಾ ಗಾಂಧಿಯವರು ಲೋಕಸಭೆಯಲ್ಲಿ ವಿಷಾದಿಸಿದರು,

"ಇದು ಸಕಾಲಿಕ ಪಾವತಿ ಹಾಗೂ  ಉದ್ಯೋಗಗಳ ಕಾನೂನು ಗ್ಯಾರಂಟಿಯನ್ನು ದುರ್ಬಲಗೊಳ್ಳುತ್ತಿದೆ. ನಿರುದ್ಯೋಗ ನಿರಂತರವಾಗಿ ಏರಿದಾಗಲೂ  ಈ ವರ್ಷದ ಮ-ನರೇಗಾ ಬಜೆಟ್ 2020 ಕ್ಕಿಂತ  35 ಶೇ.ಕಡಿಮೆ ಇದೆ.  ಕಾರ್ಮಿಕರ ಬಜೆಟ್ ಕಡಿತಗೊಳ್ಳುವುದರಿಂದ ಪಾವತಿಯಲ್ಲಿ ವಿಳಂಬವಾಗುತ್ತದೆ "ಎಂದು ಗಾಂಧಿ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News