ಕೆಸಿಎಫ್ ದುಬೈ ನೋರ್ತ್ ಝೋನ್; ನೂತನ ಪದಾಧಿಕಾರಿಗಳ ಆಯ್ಕೆ

Update: 2022-03-31 11:52 GMT

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ದುಬೈ ನೋರ್ತ್ ಝೋನ್ ಸಮಿತಿಯ ಮಹಾಸಭೆಯು ದೇರಾ ಲ್ಯಾಂಡ್ ಮಾರ್ಕ್ ಪ್ಲಾಝಾ ಹಾಲ್ ನಲ್ಲಿ ಝೋನ್ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ಅಧ್ಯಕ್ಷತೆಯಲ್ಲಿ ನಡೆಯಿತು.

ಝೋನ್ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಲತ್ವೀಫೀ ರವರ ದುಆದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಹಾಫಿಳ್ ಆಶಿಕ್ ಅಝ್ಹರಿ ಕಿರಾಅತ್ ಪಾರಾಯಣ ಮಾಡಿದರು. ಪ್ರಸ್ತುತ ಸಭೆಯನ್ನು ಪ್ರಧಾನ ಕಾರ್ಯದರ್ಶಿ ಹಂಝ ಎಮ್ಮೆಮಾಡು ಸ್ವಾಗತಿಸಿದರು. 

ರಾಷ್ಟ್ರೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಇಕ್ಬಾಲ್ ಕಾಜೂರು ಕಾರ್ಯಕ್ರಮವನ್ನು ಉದ್ಘಾಟಿಸಿ, 2019-2022ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಹಂಝ ಎಮ್ಮೆಮಾಡು ವಾಚಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ರವರು ಸಹಕರಿಸಿದ ಝೋನ್, ಸೆಕ್ಟರ್ ಹಾಗೂ ಯೂನಿಟ್ ನ ನಾಯಕರಿಗೆ ಕಾರ್ಯಕರ್ತರಿಗೆ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಸಂಘಟನೆ ನಡೆದು ಬಂದ ಹಾದಿಯ ಬಗ್ಗೆ ಮತ್ತು ಇನ್ನು ಮಾಡಬೇಕಾದ ಕೆಲಸ ಕಾರ್ಯದ ಬಗ್ಗೆ ವಿವರ ನೀಡಿದರು.

ರಿಟರ್ನಿಂಗ್ ಆಫೀಸರ್ ಆಗಿದ್ದ ರಾಷ್ಟ್ರೀಯ ಸಮಿತಿ  ನಾಯಕರಾದ ಕರೀಂ ಮುಸ್ಲಿಯಾರ್ ಹಾಲೀ ಸಮಿತಿಯನ್ನು ಬರ್ಕಾಸ್ತು ಗೊಳಿಸಿ, 2022-2024 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.

ನೂತನ ಸಮಿತಿ ಅಧ್ಯಕ್ಷರಾಗಿ ಇಸ್ಮಾಯಿಲ್ ಮದನಿ ನಗರ, ಪ್ರಧಾನ ಕಾರ್ಯದರ್ಶಿ ನಿಯಾಝ್ ಬಸರ ಕೋಶಾಧಿಕಾರಿಯಾಗಿ ರಫೀಕ್ ಚಾಮಿಯಾಲ್  ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಲತೀಫ್ ಪಾತೂರ್ ಕಾರ್ಯದರ್ಶಿ ಯಾಗಿ ಮುಸ್ತಫಾ ಮಾಸ್ಟರ್ ಉಳ್ಳಾಲ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಹಮೀದ್ ಸಖಾಫಿ ಬೆಳ್ಳಾರೆ, ಕಾರ್ಯದರ್ಶಿಯಾಗಿ ಅಬ್ಬಾಸ್ ಮಂಜನಾಡಿ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಮಜೀದ್ ಮಂಜನಾಡಿ, ಕಾರ್ಯದರ್ಶಿಯಾಗಿ ಬಶೀರ್ ಪಡುಬಿದ್ರೆ, ಪಬ್ಲಿಕೇಶನ್ ವಿಭಾಗದ ಅಧ್ಯಕ್ಷರಾಗಿ ಶುಕೂರ್ ಮಣಿಲಾ, ಕಾರ್ಯದರ್ಶಿಯಾಗಿ ಝುಬೈರ್  ಕೊಂಡಂಗೇರಿ, ಆಡಳಿತ ವಿಭಾಗದ ಅಧ್ಯಕ್ಷರಾಗಿ ರಿಯಾಝ್, ಕೊಂಡಂಗೇರಿ ಕಾರ್ಯದರ್ಶಿಯಾಗಿ ಹಬೀಬ್ ಸಜೀಪ, ಇಹ್ಸಾನ್ ವಿಭಾಗದ ಅಧ್ಯಕ್ಷರಾಗಿ ಇಬ್ರಾಹಿಂ ಮದನಿ ಸಾಮಣಿಗೆ, ಕಾರ್ಯದರ್ಶಿಯಾಗಿ ಮುಹಮ್ಮದ್ ಅಲೀ ಅಬ್ಬೆಟ್ಟು ಆಯ್ಕೆಯಾದರು. 

ರಾಷ್ಟ್ರೀಯ ನಾಯಕರಾದ ರಹೀಂ ಕೋಡಿ, ಆಶ್ರಫ್ ಹಾಜಿ ಮುಂತಾದ ನಾಯಕರು ಉಪಸ್ಥಿತರಿದ್ದರು. ಝೋನ್ ಅಧೀನದಲ್ಲಿ ಇರುವ ನೈಫ್, ನಕೀಲ್, ಹೋರ್ಲಂಝ್, ಕಿಸೈಸ್ ಮತ್ತು ಅಲ್ ಮುರಾರ್ ಸೆಕ್ಟರ್ ಗಳ ಅಧ್ಯಕ್ಷರುಗಳಾದ ಹಝ ಸಖಾಫಿ ಕೊಟ್ಟಮುಡಿ, ಉಮ್ಮರ್ ಮುಸ್ಲಿಯಾರ್ ಸಂಪ್ಯ, ರಹೀಂ ಉಪ್ಪಳ, ಅಬ್ದುಲ್ಲಾ ಸಖಾಫಿ ಕೊಟ್ಟಮುಡಿ ಮತ್ತು ಅಶ್ರಫ್ ಮದನಿ ಕುಪ್ಪೆಟ್ಟಿ ರವರುಗಳು ನೂತನ ಸಮಿತಿಗೆ ಶುಭಾಶಯ ಕೋರಿ ಮಾತನಾಡಿದರು. ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ನಿಯಾಝ್ ಬಸರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News