ಗರಿಷ್ಟ ಒತ್ತಡದ ವಿಫಲ ಕಾರ್ಯನೀತಿ: ಅಮೆರಿಕದ ಹೊಸ ನಿರ್ಬಂಧಗಳಿಗೆ ಇರಾನ್ ಟೀಕೆ

Update: 2022-03-31 18:02 GMT

ಟೆಹ್ರಾನ್, ಮಾ.31: ಇರಾನ್ ಜನತೆಯ ಮೇಲೆ ಒತ್ತಡ ಹಾಕುವ ಎಲ್ಲಾ ಅವಕಾಶಗಳನ್ನೂ ಅಮೆರಿಕ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಇರಾನ್ನ ಮೇಲೆ ಅಮೆರಿಕ ವಿಧಿಸಿರುವ ಹೊಸ ನಿರ್ಬಂಧಗಳು ಪುರಾವೆಯಾಗಿವೆ ಎಂದು ಇರಾನ್ ವಿದೇಶ ವ್ಯವಹಾರ ಇಲಾಖೆಯ ವಕ್ತಾರ ಸಯೀದ್ ಖತೀಬ್ಝಾದೆ ಗುರುವಾರ ಹೇಳಿದ್ದಾರೆ.

ಇರಾನ್ನ ಖಂಡಾಂತರ ಕ್ಷಿಪಣಿ ಯೋಜನೆಗೆ ನೆರವು ಒದಗಿಸಲು ಪ್ರಮುಖ ಪಾತ್ರ ವಹಿಸಿದ ಇರಾನ್ನ ಮಧ್ಯವರ್ತಿ ಹಾಗೂ ಆತನ ಸಂಸ್ಥೆಯ ವಿರುದ್ಧ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ಅಮೆರಿಕ ಬುಧವಾರ ಘೋಷಿಸಿತ್ತು. ಇರಾನ್ ಜನರ ಕುರಿತು ಅಮೆರಿಕದ ಹಗೆತನದ ಧೋರಣೆಗೆ ಇದು ಮತ್ತೊಂದು ಸಾಕ್ಷಿಯಾಗಿದೆ ಮತ್ತು ಗರಿಷ್ಟ ಒತ್ತಡದ ವಿಫಲ ಕಾರ್ಯನೀತಿಯ ಮುಂದುವರಿಕೆಯಾಗಿದೆ ಎಂದು ಯೀದ್ ಖತೀಬ್ಝಾದೆ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News