ಎಪ್ರಿಲ್‌ ತಿಂಗಳನ್ನು ʼದಲಿತ ಇತಿಹಾಸ ತಿಂಗಳುʼ ಎಂದು ಗುರುತಿಸಿದ ಕೆನಡಾದ ಬ್ರಿಟಿಷ್ ಕೊಲಂಬಿಯಾ ಸರ್ಕಾರ

Update: 2022-04-01 14:33 GMT
Photo: Twitter/PTI

ವಿಕ್ಟೋರಿಯಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ನ್ಯೂ ಡೆಮಾಕ್ರಟಿಕ್ ಪಕ್ಷದ ಸರ್ಕಾರವು ಏಪ್ರಿಲ್ ಅನ್ನು 'ದಲಿತ ಇತಿಹಾಸ' ತಿಂಗಳು ಎಂದು ಗುರುತಿಸಿದೆ. ದಲಿತರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಇತಿಹಾಸದ ಪ್ರಮುಖ ವ್ಯಕ್ತಿಗಳು ಮತ್ತು ಘಟನೆಗಳನ್ನು ನೆನಪಿಟ್ಟುಕೊಳ್ಳಲು ಪ್ರತಿ ವರ್ಷ ʼದಲಿತ ಇತಿಹಾಸʼ ತಿಂಗಳನ್ನು ಆಚರಿಸಲಾಗುತ್ತದೆ ಎಂದು indiatoday.in ವರದಿ ಮಾಡಿದೆ.

ಭಾರತದ ಸಂವಿಧಾನದ ಶಿಲ್ಪಿ ಬಿ ಆರ್ ಅಂಬೇಡ್ಕರ್  ಬೆಂಬಲಿಗರು  ಏಪ್ರಿಲ್‌ ಅನ್ನು  ದಲಿತ ತಿಂಗಳಾಗಿ ಜಾಗತಿಕವಾಗಿ ಆಚರಿಸುತ್ತಾರೆ. ಜನರ ವಿರುದ್ಧ ವರ್ಣಭೇದ ತಾರತಮ್ಯದ ವಿರುದ್ಧ  ಹೋರಾಡಲು ಮತ್ತು ಎಲ್ಲರಿಗೂ ನ್ಯಾಯ ಮತ್ತು ಸಮಾನತೆಯನ್ನು ಕಲ್ಪಿಸುವ ಸಲುವಾಗಿ ಎಪ್ರಿಲ್‌ ತಿಂಗಳನ್ನು ʼದಲಿತ ಇತಿಹಾಸ ತಿಂಗಳುʼ ಎಂದು ಆಚರಿಸುವುದಾಗಿ ಬ್ರಿಟಿಷ್ ಕೊಲಂಬಿಯಾ ಸರ್ಕಾರವು ಹೇಳಿದೆ.

"ಏಪ್ರಿಲ್ ದಲಿತ ಸಮುದಾಯಗಳಿಗೆ ಮಹತ್ವದ ತಿಂಗಳು. ಇದು ಜಾತಿ ಆಧಾರಿತ ತಾರತಮ್ಯದ ವಿರುದ್ಧದ ಚಳವಳಿ ಮಾಡಿದ ಪ್ರಮುಖ ದಲಿತ ನಾಯಕರು ಮತ್ತು ಸಮಾಜ ಸುಧಾರಕರ ಜನ್ಮ ಮತ್ತು ಮರಣ ವಾರ್ಷಿಕೋತ್ಸವಗಳು ಎಪ್ರಿಲ್‌ ತಿಂಗಳಲ್ಲಿದೆ. ಉದಾಹರಣೆಗೆ ಬಿಆರ್ ಅಂಬೇಡ್ಕರ್, ಜ್ಯೋತಿರಾವ್ ಫುಲೆ, ಮಂಗು ರಾಮ್ ಮುಗೋವಾಲಿಯಾ ಮತ್ತು ಸಂತ ರಾಮ್ ಉದಾಸಿ… ," ಎಂದು ಸರ್ಕಾರ ಹೇಳಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News