ಪೆಟ್ರೋಲ್, ಡೀಸೆಲ್ ದರ ಮತ್ತೆ 80 ಪೈಸೆ ಹೆಚ್ಚಳ

Update: 2022-04-03 02:08 GMT

ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್ ಗೆ ಮತ್ತೆ 80 ಪೈಸೆಯಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 103.41 ರೂಪಾಯಿ ಮತ್ತು ಡೀಸೆಲ್ ದರ 94.67 ರೂಪಾಯಿ ಆಗಲಿದೆ.

ಸರ್ಕಾರಿ ಸ್ವಾಮ್ಯದ ಚಿಲ್ಲರೆ ಮಾರಾಟ ಸಂಸ್ಥೆಗಳು ಈ ಪರಿಷ್ಕೃತ ದರವನ್ನು ಜಾರಿಗೊಳಿಸಿದ್ದು, ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್‍ಗೆ 118.41 ರೂಪಾಯಿ ಮತ್ತು ಡೀಸೆಲ್ ದರ 102.64 ರೂಪಾಯಿ ಆಗಲಿದೆ.

ಇದರಿಂದ ಕಳೆದ 13 ದಿನಗಳಲ್ಲಿ ಪೆಟ್ರೋಲ್ ದರ ಲೀಟರ್‍ಗೆ 8 ರೂ. ಹೆಚ್ಚಿದಂತಾಗಿದೆ. ದೇಶಾದ್ಯಂತ ಬೆಲೆ ಹೆಚ್ಚಳವಾಗಿದ್ದು, ನಿಖರವಾಗಿ ಬಂಕ್‍ಗಳಲ್ಲಿ ಬೆಲೆ ಆಯಾ ರಾಜ್ಯಗಳ ಸ್ಥಳೀಯ ತೆರಿಗೆಗಳಿಗೆ ಅನುಸಾರವಾಗಿರುತ್ತದೆ. ಮಾರ್ಚ್ 22ರಿಂದ ದೈನಿಕ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದ್ದು, ಕಳೆದ ಹದಿಮೂರು ದಿನಗಳಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಸುತ್ತಿರುವುದು ಇದು ಹನ್ನೊಂದನೇ ಬಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News