ಸೌದಿಯಲ್ಲಿ ಸಂಕಷ್ಟದಲ್ಲಿದ್ದ ಮೂವರು ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಂ ಸಹಾಯಹಸ್ತ

Update: 2022-04-03 09:43 GMT

ರಿಯಾದ್: ಸೌದಿ ಅರೇಬಿಯಾದ ರಿಯಾದ್ ನಗರಕ್ಕೆ ಕೆಲಸದ ನಿಮಿತ್ತ ಬಂದು ಕೆಲಸವಿಲ್ಲದೇ ಪರದಾಡುತ್ತಿದ್ದ ಮೂವರು ಯುವಕರನ್ನು ಭಾರತಕ್ಕೆ ಮರಳಿ ಕಳುಹಿಸಲು ಇಂಡಿಯನ್ ಸೋಶಿಯಲ್ ಫೋರಂ ಯಶಸ್ವಿಯಾಯಿತು.

ಕೆಲವು ತಿಂಗಳುಗಳ ಹಿಂದೆ ಸಲಾಹುದ್ದೀನ್ ಸಲ್ಮಾನ್, ತೌಹೀದ್ ಮೈಸೂರ್ ಮತ್ತು ಸಫ್ವಾನ್ ಅಬ್ದುಲ್ ರಹ್ಮಾನ್‌ ಅವರು ಮಂಗಳೂರಿನ ಟ್ರಾವೆಲ್ ಏಜೆಂಟ್ ಮುಖಾಂತರ ವೀಸಾಗೆ ಹಣ ಪಾವತಿಸಿ ಸೌದಿ ಅರೇಬಿಯಾದ ರಿಯಾದ್ ಗೆ ಬಂದಿದ್ದರು. ಕೆಲಸವು ಇಲ್ಲದೆ, ಸರಿಯಾದ ವಾಸ್ತವ್ಯ ವಿಲ್ಲದೆ ಆರ್ಥಿಕವಾಗಿ ನೊಂದು ತಿನ್ನಲು ಆಹಾರ ವಿಲ್ಲದೆ ಪರದಾಡುವಂತಾಯಿತು.

ಈ ವಿಷಯ ತಿಳಿದ ಇಂಡಿಯನ್ ಸೋಶಿಯಲ್ ಫೋರಂನ ನಿಝಾಮ್ ಬಜ್ಪೆ ಹಾಗು ಜವಾದ್ ಬಸ್ರೂರು ನೇತೃತ್ವದ ತಂಡವು ಕೂಡಲೇ ಕಾರ್ಯಪ್ರವೃತ್ತರಾಗಿ ಸಂತ್ರಸ್ಥರನ್ನು ಭೇಟಿಯಾಗಿ ಉೂಟಕ್ಕೆ ಬೇಕಾದ ವ್ಯವಸ್ಥೆ ಹಾಗು ಮೂಲ ಸೌಕರ್ಯವನ್ನು ಒದಗಿಸಲಾಯಿತು. ನೊಂದ ಸಂತ್ರಸ್ಥರಿಗೆ ಮರಳಿ ಭಾರತಕ್ಕೆ ಕಳುಹಿಸುದಾಗಿ ಭರವಸೆ ನೀಡಿ ಆತ್ಮ ಸ್ಥೈರ್ಯ ತುಂಬಲಾಯಿತು.

ಸಂತ್ರಸ್ಥರ ಪರವಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ಕೇಸನ್ನು ದಾಖಲಿಸಿ, ಭಾರತೀಯ ರಾಯಭಾರಿ ಕಚೇರಿಯನ್ನು ನಿರಂತರ ಸಂಪರ್ಕಿಸಿ ಕೊನೆಗೆ ನಿರ್ಗಮನ ಪತ್ರವನ್ನು ಕಂಪೆನಿಯ ಮುಖಾಂತರ ಪಡೆಯಲಾಯಿತು.

ಮೊದಲ ಹಂತದಲ್ಲಿ ತೌಹೀದ್ ಮೈಸೂರ್ ಹಾಗು ಸಫ್ವಾನ್ ಅಬ್ದುಲ್ ರಹ್ಮಾನ್ ರವರನ್ನು ಭಾರತಕ್ಕೆ ಕಳುಹಿಸಲು ಯಶಸ್ವಿಯಾಯಿತು. ಎರಡನೇ ಹಂತದಲ್ಲಿ ಸಲಾಹುದ್ದೀನ್ ಸಲ್ಮಾನ್ ರವರನ್ನು ಇಂಡಿಯನ್ ಸೋಶಿಯಲ್ ಫೋರಂ ಮುಖಾಂತರ ವಿಮಾನಯಾನದ ಟಿಕೆಟ್ ನೀಡಿ ಭಾರತಕ್ಕೆ ಮರಳಿ ಕಳುಹಿಸಲಾಯಿತು.

ಇಂತಹ ಮಾನವೀಯ ಸೇವೆಗೆ ಸಂತ್ರಸ್ಥರು ಇಂಡಿಯನ್ ಸೋಶಿಯಲ್ ಫೋರಂ ಸಂಘಟನೆ ಹಾಗೂ ಅದರ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News