ರಾಜ್ಯದಲ್ಲಿ 7 ಸಾವಿರ ಕೋಟಿ ರೂ. ವೆಚ್ಚದ ರಸಗೊಬ್ಬರ ಕಾರ್ಖಾನೆ ಆರಂಭಿಸುವ ಪ್ರಸ್ತಾಪವಿದೆ: ಸಚಿವ ಮುರುಗೇಶ್ ನಿರಾಣಿ

Update: 2022-04-03 11:52 GMT

ಮಂಗಳೂರು: ರಾಜ್ಯದಲ್ಲಿ 7000 ಕೋಟಿ ರೂ. ವೆಚ್ಚದ ರಸಗೊಬ್ಬರ ಕಾರ್ಖಾನೆ ಆರಂಭಿಸುವ ಪ್ರಸ್ತಾಪ ಸರಕಾರದ ಮುಂದಿದೆ. ಈ ಬಗ್ಗೆ ಸ್ಥಳ ಆಯ್ಕೆ ಯಲ್ಲಿ  ಪ್ರಥಮ ಪ್ರಾಶಸ್ತ್ಯ ಮಂಗಳೂರಿಗೆ ನೀಡಲಾಗುವುದು ಎಂದು  ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ   ತಿಳಿಸಿದ್ದಾರೆ.

ಅವರು ನಗರದ ಎಸ್ ಸಿಡಿಸಿಸಿ ಕಚೇರಿಗೆ ಆಗಮಿಸಿದ ಸಂದರ್ಭ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರಕಾರದ ನೆರವಿನಿಂದ ಈ ಬೃಹತ್ ಕಾರ್ಖಾನೆ ಯನ್ನು ಆರಂಭಿಸಿ ರಸಗೊಬ್ಬರ ಕೊರತೆ ಯನ್ನು ನೀಗಿಸುವ ಉದ್ದೇಶ ಸರಕಾರ ಹೊಂದಿದೆ. ರಾಜ್ಯ ದ ಮಂಗಳೂರು, ದಾವಣಗೆರೆ ಅಥವಾ ಬೆಳಗಾವಿಯಲ್ಲಿ ಈ ಕಾರ್ಖಾನೆ ಆರಂಭಿಸಲಾಗುವುದು. ಈ ಕಾರ್ಖಾನೆ ಆರಂಭವಾದರೆ ಸುಮಾರು 10ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

*64ಕೋಟಿ ರೂಪಾಯಿ ವೆಚ್ಚ ದ ಕೈಗಾರಿಕಾ ಪಾರ್ಕ್ :- ಮಂಗಳೂರಿನಲ್ಲಿ ಕೇಂದ್ರ ಸರಕಾರದ ತಲಾ 32ಕೋಟಿ ರೂ ವೆಚ್ಚ ದ ಕೇಂದ್ರ ಮತ್ತು  ರಾಜ್ಯ ಸರಕಾರದ ಸಹಯೋಗದ ರಪ್ತು ಉತ್ತೇಜಿಸುವ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡಲು  ಸುಮಾರು 1000ಎಕರೆ ಭೂಮಿಯನ್ನು ದ.ಕ ಜಿಲ್ಲೆಯ ಲ್ಲಿ ಗುರುತಿಸಲಾಗಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಸ್ಥಳೀಯರಿಗೆ ಉದ್ಯೋಗ ಅವಕಾಶ -ಸರೋಜಿನಿ ಮಹಿಷಿ ವರದಿಯ ಪ್ರಕಾರ  ಸ್ಥಳೀಯ ರಿಗೆ ಉದ್ಯೋಗ ನೀಡಬೇಕು. ಈ ಬಗ್ಗೆ ಆರೋಪಗಳನ್ನು ಹೊಂದಿರುವ ಸಂಸ್ಥೆ ಗಳ ವಿರುದ್ಧ ಕಾರ್ಮಿಕ ಇಲಾಖೆಯ ಮೂಲಕ ಮೂಲಕ ತನಿಖೆಗೆ ಅವ ಕಾಶವಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ರಾಜ್ಯ ದಲ್ಲಿ ನಡೆದ ಮೂರು ಜಾಗತಿಕ ಹೂಡಿಕೆ ದಾರರ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಮುಂದಿನ ನ.2,3,4ರಂದು ಜಾಗತಿಕ ಹೂಡಿಕೆ ದಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು. ಕೋವಿಡ್ ನಂತರ ರಾಜ್ಯದ ಕೈಗಾರಿಕಾ ಬೆಳವಣಿಗೆ ಪ್ರಗತಿಯಲ್ಲಿದೆ. ನೂತನ ಕೈಗಾರಿಕಾ ನೀತಿ (2022-25)ರಾಜ್ಯ ದಲ್ಲಿ ಪ್ರಗತಿಯಲ್ಲಿದೆ ಎಂದರು. ಪ.ಜಾತಿ ಮತ್ತು ಪ.ಪಂಗಡದವರಿಗೆ ಮತ್ತು ಆರ್ಥಿಕ ವಾಗಿ ಹಿಂದುಳಿದವರಿಗೆ ಕೈಗಾರಿಕಾ ಸ್ಥಾಪನೆಗೆ ಎರಡು ಎಕರೆಯವರೆಗೆ ಶೇ.75ರಿಯಾಯಿತಿ ದರದಲ್ಲಿ ಭೂಮಿ ಖರೀದಿಸಲು ಅವಕಾಶ ವಿದೆ ಎಂದು ನಿರಾಣಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News