ಕಾರ್ಕಳ ಪರಿಸರದಲ್ಲಿ ಗೋ ಕಳ್ಳತನ ಪ್ರಕರಣ; ಮುಸ್ಲಿಂ ಒಕ್ಕೂಟ ಖಂಡನೆ

Update: 2022-04-03 16:14 GMT
ಮೊಹಮ್ಮದ್ ಶರೀಫ್

ಕಾರ್ಕಳ : ಕಾರ್ಕಳ ಪರಿಸರದಲ್ಲಿ ಇತ್ತೀಚಿಗೆ ಗೋ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗೋ ಕಳ್ಳರು ರಾಜಾರೋಷವಾಗಿ ಅಮಾನುಷ ಹಾಗೂ ಅಮಾನವೀಯವಾಗಿ ಗೋವುಗಳನ್ನು ಕದ್ದೊಯ್ಯುತ್ತಿರುವುದು ತೀರಾ ಖೇದಕರವಾದ ಸಂಗತಿ ಹಾಗೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ( ರಿ) ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಶರೀಫ್ ಬಂಗ್ಲೆಗುಡ್ಡೆ ಖಂಡಿಸಿದ್ದಾರೆ.

ಗೋ ಕಳ್ಳತನದಿಂದ ಗೋವುಗಳನ್ನು ನಂಬಿ ಅವುಗಳ ಆದಾಯದಿಂದಲೇ ಬದುಕು ಕಟ್ಟಿಕೊಂಡಿರುವ ಅದೆಷ್ಟೋ ಬಡಜನರು ಗೋವುಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ ಮಾತ್ರವಲ್ಲದೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಇಂತಹ ದುಷ್ಕೃತ್ಯಗಳಿಂದ ದಕ್ಕೆಯಾಗುತ್ತಿದೆ. ಇಂತಹ ಗೋ ಕಳ್ಳತನ ಮಾಡುತ್ತಿರುವ ಕಿಡಿಗೇಡಿಗಳು ಯಾರೇ ಆಗಿರಲಿ ಅಂತಹ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News