×
Ad

ಕಾಸರಗೋಡು : ತಂದೆಯನ್ನೇ ಕೊಲೆಗೈದ ಪುತ್ರ; ಆರೋಪಿ ಸೆರೆ

Update: 2022-04-05 13:00 IST

ಕಾಸರಗೋಡು : ತಂದೆಯನ್ನು ಪುತ್ರ ಕೊಲೆಗೈದ ಘಟನೆ ಆದೂರು ಸಮೀಪದ ಪಾಂಡಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬಾಲಕೃಷ್ಣ (56)  ಮೃತರು ಎಂದು ಗುರುತಿಸಲಾಗಿದೆ.

ಕೊಲೆ ಕೃತ್ಯಕ್ಕೆ ಸಂಬಂಧಪಟ್ಟಂತೆ ಅವರ ಪುತ್ರ ನರೇಂದ್ರ ಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪಾನಮತ್ತರಾಗಿ ಪರಸ್ಪರ ಹೊಡೆದಾಡಿ ಕೊಂಡಿದ್ದು, ಈ ಸಂದರ್ಭದಲ್ಲಿ ಪುತ್ರನ ಹೊಡೆತಕ್ಕೆ ತಂದೆ ಬಲಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ಆದೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News