ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನೊಂದಿಗೆ ರಾಜಕೀಯ ಅಸ್ಥಿರತೆ: ಬಹುಮತ ಕಳೆದುಕೊಂಡ ರಾಜಪಕ್ಸ ಸರಕಾರ

Update: 2022-04-05 12:45 GMT

ಕೊಲಂಬೋ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಮೊದಲ ಬಾರಿಗೆ ಮಂಗಳವಾರ ಕಲಾಪ ಆರಂಭವಾಗಿದೆ. ಕಲಾಪ ಪ್ರಾಂಭವಾಗುತ್ತಿದ್ದಂತೆ, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ನೇತೃತ್ವದ ಆಡಳಿತ ಒಕ್ಕೂಟವು ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿದೆ ಎಂದು newindianexpress.com ವರದಿ ಮಾಡಿದೆ.

ರಾಜಪಕ್ಸ ಕುಟುಂಬದ ವಿರುದ್ಧ ಸಾರ್ವಜನಿಕ ಆಕ್ರೋಶ ಹೆಚ್ಚಾದ ಬಳಿಕ ಕನಿಷ್ಠ 41 ಮಂದಿ ಶಾಸಕರು ಮೈತ್ರಿಕೂಟದಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಹಿಂದೆ, ಅಧ್ಯಕ್ಷ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪ್ರತಿಪಾದಿಸಿದ್ದರು, ಆದಾಗ್ಯೂ, ಸಂಸತ್ತಿನಲ್ಲಿ ಬಹುಮತವನ್ನು ಸಾಬೀತುಪಡಿಸುವವರಿಗೆ ಸರ್ಕಾರವನ್ನು ಹಸ್ತಾಂತರಿಸಲು ಅವರು ಸಿದ್ಧರಿದ್ದಾರೆ ಎಂದು ವರದಿ ಹೇಳಿದೆ.
 

ಮತ ಎಣಿಕೆ ಇನ್ನೂ ನಡೆಯಬೇಕಿರುವುದರಿಂದ, ಆಡಳಿತಾರೂಢ ಒಕ್ಕೂಟವು ಅಲ್ಪಮತ ಹೊಂದಿದ್ದು, ಸ್ವತಂತ್ರ ಸದಸ್ಯರು ಬೆಂಬಲಿಸದ ಹೊರತು ಸರ್ಕಾರದ ಪ್ರಸ್ತಾವನೆಗಳನ್ನು ಅಂಗೀಕರಿಸುವುದು ಕಠಿಣವಾಗಬಹುದು ಎಂದು ಹೇಳಲಾಗಿದೆ.

ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಸಹೋದರ ಬಸಿಲ್ ರಾಜಪಕ್ಸ ಬದಲಿಗೆ ಹಣಕಾಸು ಸಚಿವ ಅಲಿ ಸಬ್ರಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದಲ್ಲೇ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜಿನಾಮೆ ಸಲ್ಲಿಸುವಾಗ, “ಈ ಅಭೂತಪೂರ್ವ ಬಿಕ್ಕಟ್ಟನ್ನು ನಿಯಂತ್ರಣಕ್ಕೆ ತರಲು ತಾಜಾ, ಪೂರ್ವಭಾವಿ ಮತ್ತು ಅಸಾಂಪ್ರದಾಯಿಕ ಕ್ರಮಗಳು ಅಗತ್ಯವಿದೆ ಎಂದು ಹೇಳಿದ್ದಾರೆ.

 ಅಲಿ ಸಬ್ರಿ ಏಪ್ರಿಲ್ 3 ರಂದು ಅವರು ನ್ಯಾಯಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಆ ವೇಳೆ, ಮತ್ತೊಂದು ಹುದ್ದೆಯನ್ನು ವಹಿಸಿಕೊಳ್ಳುವ ಉದ್ದೇಶ ಇರಲಿಲ್ಲ ಎಂದು ಸಬ್ರಿ ತಿಳಿಸಿದ್ದರು. ಅದಾಗ್ಯೂ ಅವರು ಹಣಕಾಸು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News