×
Ad

ಆನ್‌ಲೈನ್‌ನಲ್ಲಿ ರಂಗಮಂದಿರ ಕಾಯ್ದಿರಿಸುವಿಕೆ, ಕಲಾವಿದರ ದತ್ತಾಂಶ ಸಂಗ್ರಹ

Update: 2022-04-05 20:29 IST

ಉಡುಪಿ, ಎ.೫: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಂಗಮಂದಿರಗಳ ಕಾಯ್ದಿರಿಸುವಿಕೆ ಮತ್ತು ಕಲಾವಿದರ ದತ್ತಾಂಶ ಸಂಗ್ರಹವನ್ನು ಆನ್‌ಲೈನ್ ಮೂಲಕ ನೋಂದಾಯಿಸುವ ಯೋಜನೆಯನ್ನು ಹಮ್ಮಿ ಕೊಳ್ಳಲಾಗಿದೆ.

ರವೀಂದ್ರ ಕಲಾಕ್ಷೇತ್ರ, ನಯನ, ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ ಆರ್ಟ್ ಗ್ಯಾಲರಿ ಮತ್ತು ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ ಬಯಲು ರಂಗಮಂದಿರಗಳನ್ನು ಸಾಂಸ್ಕೃತಿಕ ಕಾರ್ಯ ಚಟುವಟಿಕೆ ಗಳಿಗಾಗಿ ಕಲಾವಿದರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ವೆಬ್‌ಸೈಟ್ -www.rangamandira.karnataka.gov.in- ಮೂಲಕ ಕಾಯ್ದಿರಿಸಬಹು ದಾಗಿದೆ.

ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯ ಕುರಿತು ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು ಹಾಗೂ ಕಲಾವಿದರು ಸೇವಾಸಿಂಧು ಪೋರ್ಟಲ್‌ನಲ್ಲಿ  -www.sevasindhu.karnataka.gov.in- ಮೂಲಕ ತಮ್ಮ ಮಾಹಿತಿಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ ೦೮೨೦-೨೯೮೬೧೬೮ನ್ನು ಸಂಪರ್ಕಿ ಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News