ದಿನೇಶ್-ಶಹಬಾಝ್‌ ಆಕರ್ಷಕ ಜೊತೆಯಾಟ: ರಾಜಸ್ತಾನ್‌ ರಾಯಲ್ಸ್‌ಅನ್ನು ಮಣಿಸಿದ ಆರ್‌ಸಿಬಿ

Update: 2022-04-05 18:32 GMT
Photo: Twitter/venkateshprasad

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​-2022 ಸರಣಿಯ 13ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ತಂಡವನ್ನು  4 ವಿಕೆಟ್ ಅಂತರದದಲ್ಲಿ ಮಣಿಸಿದೆ.

ದಿನೇಶ್ ಕಾರ್ತಿಕ್ ಶಹಬಾಜ್ ಅಹಮದ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಪಂದ್ಯವನ್ನು ಗೆದ್ದುಕೊಂಡಿದೆ  ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 169 ರನ್​ಗಳಿಸಿತು. ರಾಜಸ್ಥಾನ ರಾಯಲ್ಸ್ ನೀಡಿದ್ದ 170 ರನ್ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ 19.1 ಓವರ್‌ಗಳಲ್ಲಿ 173 ರನ್ ಗಳಿಸಿ ವಿಜಯದ ನಗೆ ಬೀರಿದೆ.

87 ರನ್ ಕಲೆಹಾಕುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡು ಬಸವಳಿದಿದ್ದ ಆರ್​ಸಿಬಿಗೆ ದಿನೇಶ್‌ ಕಾರ್ತಿಕ್‌ ಮತ್ತು ಶಹಬಾಝ್‌ ಆಹ್ಮದ್‌ ಅವರ ಜೊತೆಯಾಟವು ಹೊಸ ಹುರುಪು ನೀಡಿತು. ಈ ಜೋಡಿಯು ಕೇವಲ 22 ಎಸೆತಗಳಲ್ಲಿ ಬಾರಿಸಿದ ಅರ್ಧ ಶತಕವು ಪಂದ್ಯದ ದಿಕ್ಕನ್ನೇ ಬದಲಿಸಿತು. ಆರ್​ಸಿಬಿ ಗೆಲುವಿನ ರೂವಾರಿಗಳಾಗಿ ಹೊರಹೊಮ್ಮಿದ ದಿನೇಶ್ ಕಾರ್ತಿಕ್ ಮತ್ತು  ಶಹಬಾಜ್ ಅಹ್ಮದ್ ಕ್ರಮವಾಗಿ 44 ಮತ್ತು 45 ರನ್‌ ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News