×
Ad

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದಿಂದ ರಹೀಂ ಉಚ್ಚಿಲ್ ಪದಚ್ಯುತಿ

Update: 2022-04-06 10:41 IST
ರಹೀಂ ಉಚ್ಚಿಲ್

ಮಂಗಳೂರು, ಎ.6: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ರಹೀಂ ಉಚ್ಚಿಲ್ ಅವರ ಪದಚ್ಯುತಿಗೆ ಕಾರಣ ತಿಳಿಸಿಲ್ಲ.‌ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ʼʼಪದಚ್ಯುತಿಗೆ ಕಾರಣ ಏನೂಂತ ತಿಳಿದಿಲ್ಲ. ಆದೇಶ ಬಂದ ಬಳಿಕವಷ್ಟೇ ನನಗೆ ವಿಷಯ ತಿಳಿಯಿತು. ಪಕ್ಷ ನನಗೆ ಎರಡು ಬಾರಿ ಅಕಾಡೆಮಿಯ ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದೆ. ಅದನ್ನು ಯಶಸ್ವಿಯಾಗಿ ಮುನ್ನಡೆಸಿದ ತೃಪ್ತಿ ಇದೆʼʼ ಎಂದು ರಹೀಂ ಉಚ್ಚಿಲ್ ಪ್ರತಿಕ್ರಿಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News