×
Ad

ದೇವಾಲಯದ ಆಭರಣಗಳನ್ನು ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡ ಕಳ್ಳ !

Update: 2022-04-06 13:19 IST
(Screengrab)

ಶ್ರೀಕಾಕುಳಂ: ಕಳ್ಳನೊಬ್ಬ ದೇವಾಲಯವೊಂದರಿಂದ ಆಭರಣಗಳನ್ನು ಕದಿಯಲು ತಾನೇ ಕೊರೆದ ರಂಧ್ರದಲ್ಲಿ ಸಿಲುಕಿಕೊಂಡ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

ದೇವಸ್ಥಾನದ ಗೋಡೆಯಲ್ಲಿ ತಾನೇ ಕೊರೆದಿದ್ದ ರಂಧ್ರದಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಕರಾವಳಿ ಜಿಲ್ಲೆ ಶ್ರೀಕಾಕುಳಂನ ಜಾಮಿ ಯೆಲ್ಲಮ್ಮ ದೇವಸ್ಥಾನದಿಂದ ಆಭರಣದೊಂದಿಗೆ ಪರಾರಿಯಾಗಲು ಯತ್ನಿಸಿದ ಆರೋಪಿ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ.

ಪಾಪ ರಾವ್ (30) ಎಂದು ಗುರುತಿಸಲಾದ ಕಳ್ಳನು ದೇವಸ್ಥಾನದ ಕಿಟಕಿಯನ್ನು ಒಡೆದು ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದಾನೆ.

ಆದರೆ ಕದ್ದ ವಸ್ತುವಿನೊಂದಿಗೆ ಹೊರಡುವಾಗ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ರಾವ್ ಸಹಾಯಕ್ಕಾಗಿ ಬೊಬ್ಬೆ ಹಾಕಿದಾಗ ಗ್ರಾಮಸ್ಥರು ಎಚ್ಚರಗೊಂಡರು.

ಕಳ್ಳನನ್ನು ಸುಲಭವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News