ಫೋರ್ಬ್ಸ್ ವಿಶ್ವದ ಬಿಲಿಯನೇರ್ ಪಟ್ಟಿ ಪ್ರಕಟ: ಮುಖೇಶ್ ಅಂಬಾನಿ ವಿಶ್ವದ 10 ನೇ ಶ್ರೀಮಂತ ವ್ಯಕ್ತಿ

Update: 2022-04-06 09:01 GMT

ಹೊಸದಿಲ್ಲಿ:  ಫೋರ್ಬ್ಸ್ ವಾರ್ಷಿಕ ವಿಶ್ವದ ಬಿಲಿಯನೇರ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿಶ್ವದ 10 ನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದು, ಭಾರತದ ಇನ್ನೋರ್ವ ಉದ್ಯಮಿ  ಗೌತಮ್ ಅದಾನಿ ಮತ್ತು ಅವರ ಕುಟುಂಬ 11 ನೇ ಸ್ಥಾನವನ್ನು ಪಡೆದಿದೆ.

 ಸ್ಪೇಸ್‌ಎಕ್ಸ್ ಹಾಗೂ  ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈ ವರ್ಷ ಅಮೆಝಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅವರನ್ನು ಅಗ್ರ ಸ್ಥಾನದಿಂದ ಕೆಳಗಿಳಿಸಿದ್ದಾರೆ.

ವಿಶ್ವ ಶ್ರೀಮಂತ ವ್ಯಕ್ತಿಗಳನ್ನು ಒಳಗೊಂಡಿರುವ 36 ನೇ ವಾರ್ಷಿಕ ಶ್ರೇಯಾಂಕದಲ್ಲಿ 2,668 ಬಿಲಿಯನೇರ್‌ಗಳಿದ್ದಾರೆ .   ಬ್ಯುಸಿನೆಸ್  ನಿಯತಕಾಲಿಕದ ಪ್ರಕಾರ, "ಯುದ್ಧ, ಸಾಂಕ್ರಾಮಿಕ ಕಾಯಿಲೆ(ಕೊರೋನ) ಹಾಗೂ  ಜಡ ಮಾರುಕಟ್ಟೆಗಳು" ಅತಿ ಶ್ರೀಮಂತರನ್ನು ಕಾಡಿದವು. ಆದಾಗ್ಯೂ, 1,000 ಬಿಲಿಯನೇರ್‌ಗಳು ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಈಗ ಶ್ರೀಮಂತರಾಗಿದ್ದಾರೆ.

ಬಿಲಿಯನೇರ್ ಪಟ್ಟಿಯಲ್ಲಿ 236 ಹೊಸಬರು ಇದ್ದಾರೆ.  ಒಟ್ಟು 4.7 ಟ್ರಿಲಿಯನ್  ಡಾಲರ್ ಮೌಲ್ಯದ 735 ಬಿಲಿಯನೇರ್‌ಗಳೊಂದಿಗೆ ಅಮೆರಿಕ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News