ಈ ತಿಂಗಳಿನಿಂದ ಎಲ್ಲಾ ಮಾಡೆಲ್‌ ಕಾರುಗಳ ಬೆಲೆಯೇರಿಕೆ: ಮಾರುತಿ ಸುಝುಕಿ ಘೋಷಣೆ

Update: 2022-04-06 11:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದ ಅತ್ಯಂತ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಝುಕಿ  ತನ್ನ ಎಲ್ಲಾ ಕಾರು ಮಾಡೆಲ್‍ಗಳ ಬೆಲೆಯನ್ನು ಈ ತಿಂಗಳು ಏರಿಸುವುದಾಗಿ ಹೇಳಿದೆ. ಬೆಲೆ ಹೆಚ್ಚಳಕ್ಕೆ ಕಚ್ಛಾ ವಸ್ತುಗಳ ಬೆಲೆ ಏರಿಕೆಯೇ ಕಾರಣ ಎಂದು ಕಂಪೆನಿ ಹೇಳಿದೆ.

ಕಳೆದೊಂದು ವರ್ಷದಿಂದ ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದ ಕಾರು ತಯಾರಿಕಾ ವೆಚ್ಚವೂ ಹೆಚ್ಚಾಗುತ್ತಿದೆ ಎಂದು ಕಂಪೆನಿ ತಿಳಿಸಿದ್ದು  ಕಾರುಗಳ ಬೆಲೆ ಏರಿಕೆ ಮಾಡುವ ಮೂಲಕ  ಹೆಚ್ಚುತ್ತಿರುವ ವೆಚ್ಚಗಳ ಸ್ವಲ್ಪ ಹೊರೆಯನ್ನು ಗ್ರಾಹಕರಿಗೆ ಹೊರಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಈ ತಿಂಗಳಿನಲ್ಲಿಯೇ ಕಾರುಗಳ ಬೆಲೆ ಏರಿಕೆಯಾಗಲಿದ್ದು ವಿವಿಧ ಮಾಡೆಲ್‍ಗಳ ಬೆಲೆ ಏರಿಕೆಯಲ್ಲಿ ವ್ಯತ್ಯಾಸವಿರಲಿದೆ ಆದರೆ ಬೆಲೆಗಳು ಎಷ್ಟು ಹೆಚ್ಚಾಗಲಿವೆ ಎಂಬುದನ್ನು ಕಂಪೆನಿ ಇನ್ನೂ ತಿಳಿಸಿಲ್ಲ.

ಜನವರಿ 2021 ಹಾಗೂ ಮಾರ್ಚ್ 2022ರ ನಡುವೆ ಕಂಪೆನಿ ತನ್ನ ವಾಹನಗಳ ಬೆಲೆಯನ್ನು ಈಗಾಗಲೇ ಸುಮಾರು ಶೇ 8.8ರಷ್ಟು ಏರಿಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News