ಶಿಕ್ಷಣ ಸಂಸ್ಥೆಗಳಲ್ಲಿ ಸಮರ್ಪಕವಾದ ದತ್ತಾಂಶ ಸಂಗ್ರಹದ ನಿರ್ವಹಣೆ ಅಗತ್ಯ : ಡಾ. ಕೆ.ಆರ್ ಚಂದ್ರಶೇಖರ್

Update: 2022-04-06 12:08 GMT

ಮೂಡುಬಿದಿರೆ: ಶಿಕ್ಷಣ ಸಂಸ್ಥೆಗಳಲ್ಲಿ ದಿನನಿತ್ಯ ಜರುಗುವ  ಚಟುವಟಿಕೆಗಳ ಮಾಹಿತಿಯನ್ನು  ಸರಿಯಾಗಿ ಸಂಗ್ರಹಿಸಿ ಇಟ್ಟು, ದತ್ತಾಂಶ ಸಂಗ್ರಹದ  ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದಾಗ ಆಂತರಿಕ ಗುಣಮಟ್ಟ ಭರವಸೆ ಕೋಶವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು  ಮಂಗಳೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಪಕ ಹಾಗೂ ಯೆನೆಪೊಯ ವಿಶ್ವವಿದ್ಯಾಲಯದ ವಿಜ್ಞಾನಿ  ಡಾ. ಕೆ.ಆರ್ ಚಂದ್ರಶೇಖರ್ ಹೇಳಿದರು.

ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ `ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ಗುಣಮಟ್ಟ ಕಾಯ್ದಿರಿಸುವಲ್ಲಿ ಐಕ್ಯೂಎಸಿಯ ಪಾತ್ರ’ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಸರ್ವೋತೋಮುಖ ಬೆಳವಣಿಗೆಯ ಗುರಿಯನ್ನು ಐಕ್ಯೂಎಸಿ ಹೊಂದಿರುತ್ತದೆ.  ಆ ಹಿನ್ನಲೆಯಲ್ಲಿ ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಶಿಕ್ಷಕರು ತಮ್ಮ ಬೆಳವಣಿಗೆಯ ಜತೆಗೆ ಸಂಸ್ಥೆಯ  ಶ್ರೇಯಸ್ಸಿನಲ್ಲಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಐಕ್ಯುಎಸಿಯು ಸದಾ ಚಲನಶೀಲವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರತ್ತಾ ಗಮನ ಹರಿಸುವುದು ಅಗತ್ಯ. ಶಿಕ್ಷಕರು ದೂರದೃಷ್ಟಿಯ ಜತೆಗೆ ಒಗ್ಗಟ್ಟಿನಲ್ಲಿ ಕೆಲಸ ಮಾಡುವ ಕೌಶಲ್ಯವನ್ನೂ ಹೊಂದಿರಬೇಕು. ಶಿಕ್ಷಣದ ಜೊತೆಗೆ ಸಂಶೋಧನೆಗೂ  ಹೆಚ್ಚು ಒತ್ತನ್ನು ನೀಡಬೇಕೆಂದರು.

ಆಳ್ವಾಸ್ ಎಂಬಿಎ ಕಾಲೇಜಿನ  ಪ್ರಾಧ್ಯಪಕಿ ಡಾ ಕ್ಯಾಥ್ರಿನ್ ನಿರ್ಮಲಾ ಪಿಂಟೋ ‘’ಪ್ರಾಕ್ಟಿಕಲ್ ಅಪ್ಲೀಕೇಷನ್ಸ್ ಆಫ್ ಟೋಟಲ್ ಕ್ವಾಲಿಟಿ ಮ್ಯಾನೆಜ್ಮೆಂಟ್ ಇನ್ ಎಜುಕೇಷನ್’’ ವಿಷಯದ ಕುರಿತು ಮಾಹಿತಿ ನೀಡಿದರು

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್,  ಐಕ್ಯುಎಸಿ ಸಂಯೋಜಕ ಡಾ. ರಾಜೇಶ್ ಬಿ, ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರವನ್ನು ಉಪನ್ಯಾಸಕ ಡಾ.ರಾಜೇಶ್ ಬಿ ಸ್ವಾಗತಿಸಿ, ವಿನ್‍ಸ್ಟನ್ ವಂದಿಸಿ, ಉಪನ್ಯಾಸಕಿ ಹರ್ಷಿಣಿ ಪಿಂಟೋ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News