×
Ad

ಭಟ್ಕಳ; ಮೀನುಮಾರುಕಟ್ಟೆ ಸ್ಥಳಾಂತರ ವಿವಾದ; ಪುರಸಭೆ ಕಚೇರಿ ಎದುರು ಪ್ರತಿಭಟನೆ

Update: 2022-04-06 17:46 IST

ಭಟ್ಕಳ: ಪುರಸಭೆಯ ಹಳೆಯ ಮೀನುಮಾರುಕಟ್ಟೆಯನ್ನು ಹೊಸ ಮೀನುಮಾರುಕಟ್ಟೆ ಸ್ಥಳಾಂತರ ಸಂಬಂಧ ಉಂಟಾದ ವಿವಾದದಲ್ಲಿ ಮೀನುಗಾರ ಮಹಿಳೆಯರು ಬುಧವಾರದಂದು ಪುರಸಭೆ ಕಚೇರಿ ಎದುರು ಮೀನು ಸುರಿದು ಪ್ರತಿಭಟನೆ ನಡೆಸಿದರು.

ಭಟ್ಕಳ ನಗರ ಭಾಗದ ಹಳೇ ಬಸ್ ಸ್ಟ್ಯಾಂಡ್ ನಲ್ಲಿರುವ ಹಿಂದಿನ  ಕಾಲದಿಂದಲೂ ಮೀನು ಮಾರಾಟ ಮಾಡುತ್ತಾ ಬಂದಿರುವ ಮೀನು ಮಾರುಕಟ್ಟೆಯಿಂದ ತಮ್ಮನ್ನು ಬೇರೆಡೆ ಸ್ಥಳಾಂತರಿಸುವ ಉದ್ದೇಶದೊಂದಿಗೆ ಕಳೆದ ಒಂದು ವಾರದಿಂದ ಮೀನುಮಾರುಕಟ್ಟೆಯನ್ನು ಸ್ವಚ್ಚಗೊಳಿಸದೆ ಇರುವುದನ್ನು ಉಗ್ರವಾಗಿ ಪ್ರತಿಭಟಿಸಿದ ಮೀನು ಮಾರಾಟ ಮಾಡುವ ಮಹಿಳೆಯರು ತಮ್ಮ ತಮ್ಮ ಮೀನುಗಳನ್ನು ಪುರಸಭೆ ಕಟ್ಟಡದ ಮುಂದೆ ಸುರಿದು ಪ್ರತಿಭಟಿ ಸಿದ್ದು ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೆÇಲೀಸರು ಹರಸಾಹಸ ಪಡುವಂತಾಯಿತು.

ಕಳೆದ 6 ದಿನಗಳಿಂದ ಮೀನು ಮಾರುವ ಮಹಿಳೆಯರು ಸ್ವತಃ ತಾವೇ ಹಣಕೊಟ್ಟು ಮೀನು ಮಾರುಕಟ್ಟೆ ಸ್ವಚ್ಚ ಮಾಡುತ್ತ ಬಂದಿದ್ದು, ಇಂದು ಅವರು ಸ್ವಚ್ಛ ಮಾಡಿರುವ ಸ್ಥಳವನ್ನು ಯಾರೋ ಮೀನಿನ ಹಾಗೂ ಕೋಳಿ ತ್ಯಾಜ್ಯವನ್ನು ತಂದು ಹಾಕಿ ಮಲಿನಗೊಳಿಸಿದ್ದಾರೆ ಎಂದು ಆರೋಪಿಸಿರುವ ಮೀನುಮಾರಾಟಗಾರರು, ಪುರಸಭೆ ವಿರುದ್ಧ ಘೋಷಣೆಯನ್ನು ಕೋಗಿ ಮೀನು ಎಸೆದು ಪ್ರತಿಭಟಿಸಿದರು. 

ಈ ಕುರಿತಂತೆ ಮಾದ್ಯಮದವರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಧ ಪರ್ವೇಜ್ ಕಾಶಿಮ್‍ಜಿ,  ಕಳೆದ ಎರಡು ವರ್ಷಗಳಿಂದ ಹಳೆ ಮೀನು ಮಾರುಕಟ್ಟೆಯನ್ನು ಹೊಸ ಮೀನು ಮಾರುಕಟ್ಟೆ ಗೆ ಸ್ಥಳಾಂತರ ಮಾಡುವು ಕುರಿ ತಂತೆ  ಸರಕಾರದ ಆದೇಶವಾಗಿದ್ದು, ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದಂತೆ ಎ.1 ರಿಂದ ಹಳೆಯ ಮೀನುಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗಿದೆ. ಈಗ ಅಲ್ಲಿ ಯಾವುದೇ ವ್ಯಾಪಾರಕ್ಕೆ ಅನುಮತಿ ಇಲ್ಲ. ಇದು ಕಾನೂನು ಬಾಹಿರವಾಗಿದೆ ಎಂದು ಮಾಹಿತಿ ನೀಡಿದರು. ಹಳೆಯ ಮೀನು ಮಾರುಕಟ್ಟೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಇಂತಹ ರಾಜಕೀಯ ಪ್ರೇರಿತ ಪ್ರತಿಭಟನೆಗಳಿಂದ ಸರ್ಕಾರದ ಯೋಜನೆಗಳನ್ನು ತಡೆಯಲು ಸಾಧ್ಯವಿಲ್ಲ. ಹಳೆ ಮೀನು ಮಾರುಕಟ್ಟೆಯನ್ನು ಹೊಸ ಮೀನು ಮಾರು ಕಟ್ಟೆಗೆ ಸ್ಥಳಾಂತರ ಮಾಡಿಯೇ ಸಿದ್ದ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News