‘ಹಿಂದುತ್ವ ಕೋಮುವಾದ ’ವನ್ನು ಸೋಲಿಸಲು ಒಂದಾಗುವಂತೆ ಪ್ರತಿಪಕ್ಷಗಳಿಗೆ ಸೀತಾರಾಮ್ ಯೆಚೂರಿ ಆಗ್ರಹ

Update: 2022-04-06 16:00 GMT
PHOTO PTI

ತಿರುವನಂತಪುರ,ಎ.6: ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು ಬಿಜೆಪಿ ಮತ್ತು ‘ಹಿಂದುತ್ವ ಕೋಮುವಾದ ’ವನ್ನು ಸೋಲಿಸಲು ಒಂದಾಗುವಂತೆ ಬುಧವಾರ ಪ್ರತಿಪಕ್ಷಗಳನ್ನು ಆಗ್ರಹಿಸಿದರು.

ಕೇರಳದ ಕಣ್ಣೂರು ನಗರದಲ್ಲಿ ಪಕ್ಷದ 23ನೇ ಮಹಾಸಭೆಯಲ್ಲಿ ಮಾತನಾಡುತ್ತಿದ್ದ ಅವರು ಭಾರತೀಯ ಗಣರಾಜ್ಯದ ಜಾತ್ಯತೀತ, ಪ್ರಜಾಸತ್ತಾತ್ಮಕ ಗುಣಲಕ್ಷಣಗಳ ಸುರಕ್ಷತೆಗಾಗಿ ಬಿಜೆಪಿಯನ್ನು ಪ್ರತ್ಯೇಕಗೊಳಿಸುವಂತೆ ಎಲ್ಲ ಪ್ರಜಾಸತ್ತಾತ್ಮಕ ಪಕ್ಷಗಳನ್ನು ಕೋರಿಕೊಂಡರು.ಜಾತ್ಯತೀತತೆಯನ್ನು ಸಾರುವ ಎಲ್ಲ ರಾಜಕೀಯ ಪಕ್ಷಗಳು ತಮ್ಮ ದೇಶಭಕ್ತಿಯ ಕರ್ತವ್ಯವನ್ನು ನಿರ್ವಹಿಸಲೇಬೇಕಿದೆ. ಸದೃಢ ಜಾತ್ಯತೀತತೆಯ ಪ್ರತಿಪಾದನೆಯಿಂದ ಮಾತ್ರ ಹಿಂದುತ್ವ ಕೋಮುವಾದವನ್ನು ಎದುರಿಸಬಹುದು ಎಂದರು.

ತ್ಯತೀತ ಪ್ರಜಾಸತ್ತಾತ್ಮಕ ಭಾರತೀಯ ಗಣರಾಜ್ಯದ ಸ್ವರೂಪವನ್ನು ಬದಲಿಸಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ ಯೆಚೂರಿ,ಮಿತಿಮೀರಿದ ಹಿಂದುತ್ವ ಅನನ್ಯತೆಯ ಕಥನವನ್ನು ಸೃಷ್ಟಿಸುವಲ್ಲಿ ಆರೆಸ್ಸೆಸ್/ಬಿಜೆಪಿ ಯಶಸ್ವಿಯಾಗಿವೆ. ದ್ವೇಷ ಮತ್ತು ಹಿಂಸೆಯ ಹರಡುವಿಕೆಯ ಮೂಲಕ ಕೋಮು ಧ್ರುವೀಕರಣವನ್ನು ತೀವ್ರಗೊಳಿಸುತ್ತಿರುವುದು ಭಾರತೀಯ ಸಮಾಜವನ್ನು ಧ್ರುವೀಕರಿಸುತ್ತಿದೆ ಮತ್ತು ಇದು ಆರೆಸ್ಸೆಸ್-ಬಿಜೆಪಿಯ ಚುನಾವಣಾ ಸಿದ್ಧತೆಯ ಆಧಾರ ಸ್ತಂಭವಾಗಿದೆ ಎಂದರು.
ಕೇರಳದ ಆಡಳಿತಾರೂಢ ಎಲ್ಡಿಸಿಯ ಭಾಗವಾಗಿರುವ ತನ್ನ ಪಕ್ಷವು ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಜಾತ್ಯತೀತವಾದವನ್ನು ಎತ್ತಿ ಹಿಡಿದಿದೆ ಎಂದು ಯೆಚೂರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News