ರಷ್ಯಾ ಜತೆ ಯಾವುದೇ ಪ್ರಮುಖ ಒಪ್ಪಂದದಿಂದ ಭಾರತ ದೀರ್ಘಕಾಲಿಕ ಪರಿಣಾಮ ಎದುರಿಸಬೇಕಾದೀತು: ಅಮೆರಿಕ ಎಚ್ಚರಿಕೆ

Update: 2022-04-07 10:46 GMT
ಅಮೆರಿಕ ಅಧ್ಯಕ್ಷ ಜೋ ಬೈಡನ್ (PTI)

ವಾಷಿಂಗ್ಟನ್: ಉಕ್ರೇನ್ ಮೇಲೆ ಆಕ್ರಮಣಗೈದಿರುವ ರಷ್ಯಾ ಪರ ನಿಲ್ಲುವ ವಿರುದ್ಧ ಭಾರತಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ. ಉಕ್ರೇನ್ ಆಕ್ರಮಣ ಕುರಿತಂತೆ ಭಾರತದ ಕೆಲವೊಂದು ಪ್ರತಿಕ್ರಿಯೆ ತಮಗೆ ನಿರಾಶೆಯುಂಟು ಮಾಡಿದೆ ಎಂದು ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳೀಯ ನಿರ್ದೇಶಕ ಬ್ರಿಯಾನ್ ಡೀಸ್ ಹೇಳಿದ್ದಾರೆ.

"ಆಕ್ರಮಣ ಕುರಿತಂತೆ ಚೀನಾ ಮತ್ತು ಭಾರತ ಎರಡೂ ದೇಶಗಳ ನಿರ್ಧಾರಗಳ ಕುರಿತಂತೆ ನಮಗೆ ನಿರಾಸೆಯಾಗಿದೆ,'' ಎಂದು ಹೇಳಿದ ಅವರು ಮಾಸ್ಕೋ ಜತೆಗೆ ಭಾರತ ಯಾವುದೇ ಪ್ರಮುಖ ಹೊಂದಾಣಿಕೆಯನ್ನು ಮಾಡಿಕೊಂಡರೆ ಅದರ ಪರಿಣಾಮ ಮಹತ್ವ ಮತ್ತು ದೀರ್ಘಕಾಲಿಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕಳೆದ ವಾರ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಅವರು ಭಾರತಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳ ಜತೆ ಚರ್ಚಿಸಿದ ನಂತರದ ಬೆಳವಣಿಗೆ ಇದಾಗಿದೆ.

ರಷ್ಯಾದ ಇಂಧನ ಹಾಗೂ ಇತರ ಸಾಮಗ್ರಿಗಳ ಆಮದನ್ನು ಹೆಚ್ಚಿಸುವುದು ಭಾರತದ ಹಿತಾಸಕ್ತಿಗೆ ಒಳ್ಳೆಯದು ಎಂದು ನಾವು ನಂಬುವುದಿಲ್ಲ ಎಂದು ದಲೀಪ್ ತಮ್ಮ ಭಾರತ ಭೇಟಿಯ ವೇಳೆ ಸ್ಪಷ್ಟಪಡಿಸಿದ್ದರು ಎಂದು ಡೀಸ್ ಹೇಳಿದರು.

ಅವರ ಹೇಳಿಕೆ ಬಗ್ಗೆ ಭಾರತ ಸರಕಾರ ಇನ್ನೂ ಪ್ರತಿಕ್ರಿಯಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News