ಉಕ್ರೇನ್ ರೈಲು ನಿಲ್ದಾಣದ ಮೇಲೆ ರಶ್ಯ ರಾಕೆಟ್ ದಾಳಿ: 30ಕ್ಕೂ ಹೆಚ್ಚು ಮಂದಿ ಮೃತ್ಯು
Update: 2022-04-08 14:45 IST
ಕೀವ್: ಪೂರ್ವ ಉಕ್ರೇನ್ ನ ಕ್ರಾಮಾಟೋರ್ಸ್ಕ್ ನಲ್ಲಿರುವ ರೈಲು ನಿಲ್ದಾಣಕ್ಕೆ ರಶ್ಯದ ಎರಡು ರಾಕೆಟ್‌ಗಳು ಅಪ್ಪಳಿಸಿದ ನಂತರ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೂ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ರಶ್ಯ-ಉಕ್ರೇನ್ ಯುದ್ಧದ ನಡುವೆ ನಿವಾಸಿಗಳನ್ನು ಸ್ಥಳಾಂತರಿಸಲು ರೈಲ್ವೆ ನಿಲ್ದಾಣವನ್ನು ಬಳಸಲಾಗುತ್ತಿತ್ತು ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.
ದೇಶದ ಸಾವಿರಾರು ನಾಗರಿಕರನ್ನು ಸುರಕ್ಷಿತ ಭಾಗಗಳಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ರಾಜ್ಯ ರೈಲ್ವೆ ಕಂಪನಿಯ ಹೇಳಿಕೆ ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ರಶ್ಯದ ಪಡೆಗಳಿಂದ ಬಾಂಬ್ ದಾಳಿಗೆ ಒಳಗಾದ ಪ್ರದೇಶಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಬಳಸಲಾಗುವ ಕ್ರಾಮಾಟೋರ್ಸ್ಕ್‌ನಲ್ಲಿರುವ ನಿಲ್ದಾಣದ ಮೇಲೆ ರಶ್ಯದ 2 ರಾಕೆಟ್‌ಗಳು ಅಪ್ಪಳಿಸಿದವು ಎಂದು ವರದಿಯಾಗಿದೆ.