ಎ.9ರಂದು ‘ಕೃಷ್ಣಾರ್ಪಣಂ’ ಭರತನಾಟ್ಯ ಕಾರ್ಯಕ್ರಮ
Update: 2022-04-08 19:34 IST
ಉಡುಪಿ, ಎ.8: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಕೃಷ್ಣಾಪುರ ಮಠದ ಆಶ್ರಯದಲ್ಲಿ ಶ್ರೀಲತಾ ಆಚಾರ್ಯ ಅವರಿಂದ ’ಕೃಷ್ಣಾರ್ಪಣಂ’ ಭರತನಾಟ್ಯ ಕಾರ್ಯಕ್ರಮ ಮಠದ ರಾಜಾಂಗಣದಲ್ಲಿ ಎ.9ರಂದು ಸಂಜೆ 7.30ಕ್ಕೆ ನಡೆಯಲಿದೆ ಎಂದು ಚಿನ್ಮಯ್ ಆಚಾರ್ಯ ತಿಳಿಸಿದ್ದಾರೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶ್ರೀಲತಾ, ಮೀರಾ ಶ್ರೀನಾರಾಯಣ್ ಅವರ ಶಿಷ್ಯೆ ಆಗಿದ್ದು, ಮುಂಬೈನಲ್ಲಿ ಭರತನಾಟ್ಯ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ಇದು ಇವರ ಮೊದಲ ಏಕವ್ಯಕ್ತಿ ಪ್ರದರ್ಶನ ವಾಗಿದೆ. ಹಿಮ್ಮೇಳನದಲ್ಲಿ ನಟುವಾಂಗ- ಮೀರಾ ಶ್ರೀನಾರಾಯಣ್, ಗಾಯನ- ಬಿಜೀಶ್ ಕೃಷ್ಣ ಗಾಯನ, ಮೃದಂಗ- ಚಾರುದತ್ತ್ ಹಾಗೂ ಪಿಟೀಲು- ಸುರೇಶ್ ನಂಜೂತೀರ್ ಸಹಕರಿಸಲಿದ್ದಾರೆ ಎಂದರು.