×
Ad

ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2022-04-08 20:48 IST

ಕೋಟ : ಅನಾರೋಗ್ಯದಿಂದ ಬಳಲುತ್ತಿದ್ದ ಮಣೂರು ಪಡುಕೆರೆ ನಿವಾಸಿ ಮರಿಯ ಪೂಜಾರಿ(65) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.7ರಂದು ಸಂಜೆ ಗುಂಡ್ಮಿ ಗ್ರಾಮದ ಹಳೆ ಕೋಟೆ ಮೈದಾನದ ಶ್ರೀಕಾಶೇಶ್ವರ ಮಯ್ಯಾರವರ ಹಾಡಿಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಅನಾರೋಗ್ಯದಿಂದ ಬಳಲುತ್ತಿದ್ದ ಕೋಟೇಶ್ವರ ಭಾಗವತ್ ಓಣಿ ರಸ್ತೆ ನಿವಾಸಿ ಜನಾರ್ಧನ ಪ್ರಭು(70) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ಎ.೭ರಂದು ರಾತ್ರಿ ಮನೆಯ ಎದುರಿನ ಬಾವಿಯ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಪು: ಅನಾರೋಗ್ಯದಿಂದ ಬಳಲುತ್ತಿದ್ದ ಏಣಗುಡ್ಡೆ ಗ್ರಾಮದ ಕಂಬ್ಲಕಟ್ಟದ ನಳಿನಿ ಅಂಚನ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.೮ರಂದು ಬೆಳಗ್ಗೆ ವೇಳೆ ಮನೆಯ ಬದಿಯ ಕೊಟ್ಟಿಗೆಯ ಕಿಟಿಕಿಗೆ ಕೇಬಲ್ ವಯರ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News