ಗುಜರಾತ್‌ನಲ್ಲಿ ಓರ್ವನಿಗೆ ಕೊರೋನವೈರಸ್ ರೂಪಾಂತರ XE ಸೋಂಕು ದೃಢ: ವರದಿ
Update: 2022-04-09 10:06 IST
ಹೊಸದಿಲ್ಲಿ: ಗುಜರಾತ್‌ನಲ್ಲಿ ಒಬ್ಬ ವ್ಯಕ್ತಿಗೆ ಕೊರೋನವೈರಸ್ ರೂಪಾಂತರ XE ಸೋಂಕು ತಗಲಿದೆ ಎಂದು ಅಧಿಕೃತ ಮೂಲಗಳು ಇಂದು NDTV ಗೆ ತಿಳಿಸಿವೆ.
ರಾಜ್ಯದಲ್ಲಿ XM ರೂಪಾಂತರದ ಒಂದು ಪ್ರಕರಣವೂ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದ್ದು, ಇಬ್ಬರು ರೋಗಿಗಳ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಈ ವಾರದ ಆರಂಭದಲ್ಲಿ ವಿದೇಶಿ ಪ್ರಯಾಣದ ಇತಿಹಾಸ ಹೊಂದಿರುವ ರೋಗಿಯು XE ರೂಪಾಂತರದ ಸಂಪರ್ಕಕ್ಕೆ ಬಂದಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆರೋಗ್ಯ ಸಚಿವಾಲಯವು ವರದಿಯನ್ನು ನಿರಾಕರಿಸಿತ್ತು. "ಪ್ರಸ್ತುತ ಪುರಾವೆಗಳು ಹೊಸ ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ" ಎಂದು ಅದು ಹೇಳಿತ್ತು.
"ಮುಂಬೈನಲ್ಲಿ ಕೊರೊನಾವೈರಸ್‌ನ XE ರೂಪಾಂತರದ ಪತ್ತೆಯ ವರದಿಯ ಗಂಟೆಗಳ ನಂತರ ಕೇಂದ್ರ ಆರೋಗ್ಯ ಸಚಿವಾಲಯವು ಪ್ರಸ್ತುತ ಪುರಾವೆಗಳು ಹೊಸ ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ ಎಂದು ಹೇಳಿದೆ" ಎಂದು ಪಿಐಬಿ ಮಹಾರಾಷ್ಟ್ರ ಗುರುವಾರ ಟ್ವೀಟ್‌ನಲ್ಲಿ ತಿಳಿಸಿತ್ತು.