×
Ad

ಭಟ್ಕಳ: ಮೊಟ್ಟೆ, ಬಲೂನ್‍ನಲ್ಲಿ ನೀರು ತುಂಬಿ ಎಸೆಯುತ್ತಿದ್ದ ಪ್ರಕರಣ; ಮೂವರು ಅಪ್ರಾಪ್ತರು ವಶಕ್ಕೆ

Update: 2022-04-09 23:23 IST

ಭಟ್ಕಳ: ರಾತ್ರಿ ವೇಳೆ ದಾರಿಹೋಕರ ಮೇಲೆ ಮೊಟ್ಟೆ ಹಾಗೂ ಬಲೂನ್‍ನಲ್ಲಿ ನೀರು ತುಂಬಿ ಎಸೆಯುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿ ಇಬ್ಬರು ಯುವಕರು ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮೊಟ್ಟೆ ಎಸೆದು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಸ್ಥಳೀಯರು ಓರ್ವನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಮೂವರು ಅಪ್ರಾಪ್ತ ಯುವಕರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ಕಾರವಾರದ ರಿಮೆಂಡ್ ಹೋಂ ಗೆ ಕಳುಹಿಸಲಾಗಿದೆ ಎಂದು  ಮಾಹಿತಿ ನೀಡಿದ್ದಾರೆ.

ಶಾಸಕರಿಂದ ಅಧಿಕಾರಿಗಳ ಸಭೆ: ಶುಕ್ರವಾರ ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಸುನಿಲ್ ನಾಯ್ಕ ಪೊಲೀಸ್ ಅಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿಯವರೊಂದಿಗೆ ಮಾತನಾಡಿ ಇಂತಹ ಘಟನೆಗೆ ಕಾರಣರಾದ ಯುಕವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರಗಿಸುವಂತೆ ಸೂಚನೆ ನೀಡಿ, ಈ ಕುರಿತಂತೆ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿರುವುದಾಗಿ ತಿಳಿಸಿದ್ದೇನೆ ಎಂದು ಶಾಸಕರು ತಮ್ಮ ಫೇಸ್ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News