ಅವ್ಯವಹಾರದ ಆರೋಪ: ನೇಮಕಾತಿ ಆದೇಶ ತಡೆ ಹಿಡಿಯಲು ಸಿಎಂಗೆ ಮನವಿ
Update: 2022-04-09 23:26 IST
ಉಡುಪಿ : ಮಂಗಳೂರಿನ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಕರೆಯಲಾದ ಹುದ್ದೆಯ ನೇಮಕಾತಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಮುಖ್ಯಮಂತ್ರಿಗಳ ಆದೇಶದಂತೆ ತನಿಖೆಯಾಗಿ ವರದಿ ಬರುವವರೆಗೂ ನೇಮಕಾತಿಯನ್ನು ತಡೆ ಹಿಡಿಯುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಈ ಹಿಂದೆ ಒಕ್ಕೂಟದ ನೇಮಕಾತಿಯಲ್ಲಿ ಅವ್ಯವಹಾರವಾಗುತ್ತಿರುವ ಬಗ್ಗೆ ಸಿಎಂಗೆ ಮಾಡಿದ ಮನವಿಯಂತೆ ಕಳೆದ ಮಾ.3ರಂದು ಮುಖ್ಯಮಂತ್ರಿಗಳು ದೂರಿನ ಬಗ್ಗೆ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ತನಿಖೆ ನಡೆಸಿ ವರದಿ ಕಳುಹಿಸುವಂತೆ ಆದೇಶಿಸಿದ್ದು, ಈ ತನಿಖಾ ವರದಿ ಬರುವವರೆಗೂ ನೇಮಕಾತಿ ಆದೇಶವನ್ನು ತಡೆ ಹಿಡಿಯುವಂತೆ ಕೋರಿ ಸಮಿತಿಯ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.