ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಹಬಾಝ್ ಶರೀಫ್ ಆಯ್ಕೆ
Update: 2022-04-11 17:05 IST
ಇಸ್ಲಾಮಾಬಾದ್: ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶಹಬಾಝ್ ಶರೀಫ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂದು ndtv.com ವರದಿ ಮಾಡಿದೆ.
ಶನಿವಾರ ಅವಿಶ್ವಾಸ ಮತದಿಂದ ಪದಚ್ಯುತಗೊಂಡ ಇಮ್ರಾನ್ ಖಾನ್ ಅವರ ಉತ್ತರಾಧಿಕಾರಿಯಾಗಿ ಶಹಬಾಝ್ ಶರೀಫ್ ಅವರು ಆಯ್ಕೆಯಾಗಿದ್ದಾರೆ. ಪಾಕ್ ಪ್ರಧಾನಿ ಆಯ್ಕೆ ಪ್ರಕ್ರಿಯೆ ರವಿವಾರ ಆರಂಭಗೊಂಡಿತ್ತು. ಇಂದು ರಾತ್ರಿ ನೂತನ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
Shehbaz Sharif to swear in as new #PakistanPM tonight
— IndiaToday (@IndiaToday) April 11, 2022
Read here for more: https://t.co/HumBJOePOk#Pakistan pic.twitter.com/wYbJNthnVf