×
Ad

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಬೆಂಗಳೂರಿನಿಂದ ಸಹೋದರ ಸೇರಿದಂತೆ ಸಂಬಂಧಿಕರು ಆಗಮನ

Update: 2022-04-12 23:24 IST

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಲಾಡ್ಜಿಗೆ ಮೃತರ ಸಹೋದರ ಹಾಗೂ ಸಂಬಂಧಿಕರು ಇಂದು ರಾತ್ರಿ ಆಗಮಿಸಿದ್ದಾರೆ.

ಮೃತರ ಸಹೋದರ ಬೆಂಗಳೂರಿನ ವಿಜಿ ಪುರಂ ಪೊಲೀಸ್ ಠಾಣೆಯ ನಿರೀಕ್ಷಕ ಬಸನ ಗೌಡ ಪಾಟೀಲ್ ಹಾಗೂ ಇತರ ಸಂಬಂಧಿಕರು ಬೆಂಗಳೂರಿನಿಂದ ಇದೀಗ ಉಡುಪಿಗೆ ಆಗಮಿಸಿದ್ದಾರೆ.

ಬೆಳಗ್ಗೆಯಿಂದ ರಾತ್ರಿವರೆಗೆ ಸೀಲ್ ಮಾಡಲಾಗಿದ್ದ ಆತ್ಮಹತ್ಯೆ ಮಾಡಿಕೊಂಡ ರೂಮಿನ ಬೀಗವನ್ನು ತೆರೆದು ಕುಟುಂಬದವರಿಗೆ ನೋಡಲು ಅವಕಾಶ ಕಲ್ಪಿಸಲಾಯಿತು.

ಸಂಬಂಧಿಕರು ಪೊಲೀಸ್‌ ಠಾಣೆಗೆ ದೂರು ನೀಡಲಿದ್ದು, ನಂತರ ಪೊಲೀಸ್ ತನಿಖೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News