ಪಾಕ್: ಸರಕಾರಿ ನೌಕರರಿಗೆ ಇನ್ನು ಮುಂದೆ ವಾರದಲ್ಲಿ ಒಂದೇ ದಿನ ರಜೆ

Update: 2022-04-12 18:22 GMT

ಇಸ್ಲಾಮಾಬಾದ್, ಎ.12: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಶಹಬಾಝ್ ಶರೀಫ್ ಅವರು ಕಾರ್ಯಾಲಯದಲ್ಲಿ ಮಂಗಳವಾ ಕರ್ತವ್ಯ ನಿರ್ವಹಿಸಿದ ಮೊದಲ ದಿನವೇ ಆಡಳಿತದಲ್ಲಿ ಕಟ್ಟುನಿಟ್ಟಿನ ಸುಧಾರಣೆಗಳನ್ನು ತರುವ ಸೂಚನೆ ನೀಡಿದ್ದಾರೆ.

ಸರಕಾರಿ ನೌಕರರ ವಾರದ ಎರಡು ರಜೆಗಳನ್ನು ರದ್ದುಪಡಿಸಿದ್ದು, ಇನ್ನು ರವಿವಾರವಷ್ಟೇ ಸರಕಾರಿ ರಜಾದಿನವಾಗಲಿದೆ. ಅಲ್ಲದೆ ಸರಕಾರಿ ಕಚೇರಿಗಳು ತೆರೆಯುವ ಸಮಯವನ್ನು 10 ಗಂಟೆಯ ಬದಲಿಗೆ 8 ಗಂಟೆಗೆ ಬದಲಾಯಿಸಲಾಗಿದೆ. ‘‘ನಾವು ಜನತೆಗೆ ಸೇವೆ ಸಲ್ಲಿಸಲು ಬಂದಿದ್ದೇವೆ. ಹೀಗಾಗಿ ನಮ್ಮ ಯಾವುದೇ ಸಮಯವನ್ನು ವ್ಯರ್ಥ ಮಾಡಬಾರದು ಎಂದವರು ತನ್ನ ಕಾರ್ಯಾಲಯದ ಸಿಬ್ಬಂದಿಯ ಜೊತೆ ಮಾತನಾಡುತ್ತಾ ತಿಳಿಸಿದರು. ‘‘ ಪಾರದರ್ಶಕತೆ, ಪ್ರಾಮಾಣಿಕತೆ,ಕಾಳಜಿ ಹಾಗೂ ಕಠಿಣ ಪರಿಶ್ರಮ ನಮ್ಮ ತತ್ವಗಳಾಗಬೇಕು’’ ಎಂದು ಹೇಳಿದರು. ಸರಕಾರಿ ನೌಕರರ ಪಿಂಚಣಿಯ ಏರಿಕೆ ಹಾಗೂ ಕನಿಷ್ಠ ವೇತನವನ್ನು 25 ಸಾವಿರ ವೇತನವನ್ನು ನಿಗದಿಪಡಿಸುವ ಘೋಷಣೆಯನ್ನು ತಕ್ಷಣವೇ ಜಾರಿಗೊಳಿಸುವಂತೆಯೂ ಅವರು ಆದೇಶಿಸಿದರು.

ದೇಶವು ಎದುರಿಸುತ್ತಿರುವ ಗಂಭೀರವಾದ ಆರ್ಥಿಕ ದುಸ್ಥಿತಿಯ ಬಗ್ಗೆ ವಿವರಣೆ ಪಡೆಯಲು ಅವರು ಆರ್ಥಿಕ ತಜ್ಞರ ಜೊತೆ ಸಮಾಲೋಚನೆಯನ್ನೂ ಕೂಡಾ ನಡೆಸಿದರು. ಪರಿಸ್ಥಿತಿಯನ್ನು ಸುಧಾರಿಸಲು ಆರ್ಥಿಕ ತಜ್ಞರ ಮಾರ್ಗದರ್ಶನ ಪಡೆಯುವಂತೆಯೂ ಅವರು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News