ಅಮಿತ್ ಶಾ 'ಹಿಂದಿ' ಹೇಳಿಕೆ ಟೀಕಿಸಿದ್ದ ಮಣಿಪುರ ಕಾಂಗ್ರೆಸ್ ನಾಯಕನ ಬಂಧನ: ದೇಶದ್ರೋಹ ಪ್ರಕರಣ ದಾಖಲು

Update: 2022-04-13 14:17 GMT
Photo: PTI

ಹೊಸದಿಲ್ಲಿ: ಈಶಾನ್ಯ ರಾಜ್ಯಗಳ ಶಾಲೆಗಳಲ್ಲಿ 10ನೇ ತರಗತಿ ತನಕ ಹಿಂದಿ ಕಲಿಕೆ ಕಡ್ಟಾಯಗೊಳಿಸಬೇಕು ಎಂದು ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಯನ್ನು ಟೀಕಿಸಿದ್ದ  ಮಣಿಪುರ ರಾಜ್ಯ ಕಾಂಗ್ರೆಸ್ ವಕ್ತಾರ ಸನೌಜಂ ಶ್ಯಾಮ್‍ಚರಣ್ ಸಿಂಗ್ ಅವರನ್ನು ಬಂಧಿಸಿ ಅವರ ವಿರುದ್ಧ ಅಲ್ಲಿನ ಎನ್ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರ ದೇಶದ್ರೋಹದ ಪ್ರಕರಣ ದಾಖಲಿಸಿದೆ. ಸ್ಥಳೀಯ ಟಿವಿ ವಾಹಿನಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮವೊಂದರಲ್ಲಿ  ಶ್ಯಾಮ್‍ಚರಣ್ ಸಿಂಗ್ ಅವರು ಅಮಿತ್ ಶಾ ಹೇಳಿಕೆಯನ್ನು ಟೀಕಿಸಿದ್ದರು.

ಮಣಿಪುರ ರಾಜ್ಯ ಬಿಜೆಪಿ ಯುವ ಘಟಕದ ಅಧ್ಯಕ್ಷ ಎಂ ಭಾರಿಶ್ ಶರ್ಮ ಅವರು ದಾಖಲಿಸಿದ ದೂರಿನ ಆಧಾರದ ಮೇಲೆ ವಕೀಲರೂ ಆಗಿರುವ ಶ್ಯಾಮ್‍ಚರಣ್ ಅವರನ್ನು ಎಪ್ರಿಲ್ 12ರಂದು ಮುಂಜಾನೆ 1 ಗಂಟೆ ಸುಮಾರಿಗೆ ಅವರ ಇಂಫಾಲ್ ನಿವಾಸದಿಂದ ಬಂಧಿಸಲಾಗಿದೆ.

ದೇಶದ್ರೋಹದ ಆರೋಪ ಹೊರಿಸಿ ಸೆಕ್ಷನ್ 124ಎ ಹೊರತಾಗಿ ಸೆಕ್ಷನ್ 295ಎ ಹಾಗೂ 505 ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶ್ಯಾಮ್‍ಚರಣ್ ಅವರನ್ನು  ಅದೇ ದಿನ ರಾತ್ರಿ ಮ್ಯಾಜಿಸ್ಟ್ರೇಟ್ ಅವರೆದುರು ಹಾಜರು ಪಡಿಸಿದ ನಂತರ ಅವರಿಗೆ ಜಾಮೀನು ನೀಡಲಾಗಿದೆ ಆದರೆ ಅವರಿಗೆ ಎಪ್ರಿಲ್ 27ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿದೆ ಎಂದು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಹಾಗೂ ವಕೀಲ ರವಿ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News