×
Ad

ಸೇನೆಯ ಮೇಲೆ ಮಾಡುವ ಖರ್ಚನ್ನು ʼಆರ್ಥಿಕ ಹೊರೆʼ ಎಂದು ಪರಿಗಣಿಸಬಾರದು: ಸೇನಾ ಮುಖ್ಯಸ್ಥ ಜನರಲ್ ನರವಣೆ

Update: 2022-04-13 20:02 IST
Photo: PTI

ಗಾಂಧಿನಗರ್:  ಸೇನಾ ಪಡೆಗಳ ಮೇಲೆ ಮಾಡಲಾಗುವ ವೆಚ್ಚವನ್ನು ದೇಶದ ಆರ್ಥಿಕತೆಯ ಮೇಲಿನ ಹೊರೆ ಎಂದು ಯಾವತ್ತೂ ಪರಿಗಣಿಸಬಾರದು ಎಂದು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಹೇಳಿದ್ದಾರೆ.

ಇಲ್ಲಿನ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಅವರು ಬುಧವಾರ ಮಾತನಾಡುತ್ತಿದ್ದರು.

"ದೇಶವೊಂದು ಅಭಿವೃದ್ಧಿಗೊಳ್ಳಲು ಸುಸ್ಥಿರ ಮತ್ತು ಶಾಂತಿಯುತ ವಾತಾವರಣದ ಅಗತ್ಯವಿದೆ. ಗಡಿಗಳನ್ನು ರಕ್ಷಿಸುವ ದೇಶದ ಭದ್ರತಾ ಪಡೆಗಳು ಬಲಿಷ್ಠವಾಗಿದ್ದಾಗ ಮಾತ್ರ ಇದು ಸಾಧ್ಯ. ಆದುದರಿಂದ ಸೇನಾಪಡೆಗಳು ಹಾಗೂ ಅವುಗಳ ಮೇಲೆ ಮಾಡಲಾಗುವ ವೆಚ್ಚಗಳ ಬಗ್ಗೆ ನಾವು ಮಾತನಾಡುವಾಗ, ಅದನ್ನೊಂದು ಹೂಡಿಕೆಯೆಂದೇ ಪರಿಗಣಿಸಬೇಕು. ಇದು ಉತ್ತಮ ಪ್ರಯೋಜನ ನೀಡುವ ಹೂಡಿಕೆಯಾಗಿದ್ದು ಹಾಗೂ ಇದು ದೇಶದ ಆರ್ಥಿಕತೆ ಮೇಲೆ ಹೊರೆ ಎಂದು ಪರಿಗಣಿಸಬಾರದು" ಎಂದು ಅವರು ಹೇಳಿದರು.

ಈ ಸಂದರ್ಭ ನರಾವಣೆ ಅವರು "ಫಿಫ್ಟಿ ಇಯರ್ಸ್ ಆಫ್ ದಿ 1971 ವಾರ್:ಅಕೌಂಟ್ ಆಫ್ ವೆಟರನ್ಸ್" ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News