×
Ad

ಟಿ20ಯಲ್ಲಿ 10 ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

Update: 2022-04-14 07:27 IST

ಹೊಸದಿಲ್ಲಿ : ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಿ-20 ಕ್ರಿಕೆಟ್‍ನಲ್ಲಿ 10 ಸಾವಿರ ರನ್ ಪೂರೈಸುವ ಮೂಲಕ ಮಹತ್ವದ ಮೈಲುಗಲ್ಲು ದಾಟಿದರು.

ಬುಧವಾರ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದರು.

ವಿರಾಟ್ ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಹಾಗೂ ಜಾಗತಿಕ ಮಟ್ಟದಲ್ಲಿ ಹತ್ತು ಸಹಸ್ರ ಟಿ-20ಯಲ್ಲಿ 10 ಸಾವಿರ ರನ್ ಗಳಿಸಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಿಂದಿನ ಪಂದ್ಯದಲ್ಲಿ ಈ ಸಾಧನೆಗೆ 25 ರನ್‍ಗಳು ಬೇಕಿದ್ದ ರೋಹಿತ್ ಶರ್ಮಾ ಕಗಿಸೊ ರಬಡ ಅವರ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 10 ಸಾವಿರದ ಗಡಿ ದಾಟಿದರು.

ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್, ಚುಟುಕು ಕ್ರಿಕೆಟ್‍ನಲ್ಲಿ ಗರಿಷ್ಠ (14562) ರನ್ ದಾಖಲೆ ಹೊಂದಿದ್ದಾರೆ. ಉಳಿದಂತೆ ಶೋಯಿಬ್ ಮಲಿಕ್ (11698), ಕೀರನ್ ಪೋಲಾರ್ಡ್ (11484), ಅರೋನ್ ಫಿಂಚ್ (10499), ವಿರಾಟ್ ಕೊಹ್ಲಿ (10379) ಮತ್ತು ಡೇವಿಡ್ ವಾರ್ನರ್ (10373) ನಂತರದ ಸ್ಥಾನಗಳಲ್ಲಿದ್ದಾರೆ.

ಅಂತೆಯೇ ಐಪಿಎಲ್‍ನಲ್ಲಿ 500ನೇ ಬೌಂಡರಿ ಹೊಡೆದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೂ ಮುಂಬೈ ಇಂಡಿಯನ್ಸ್ ನ ಈ ಸ್ಟಾರ್ ಆಟಗಾರ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News