ಭಟ್ಕಳ: ಹಬಿಬುಲ್ಲಾ ರುಕ್ನುದ್ದೀನ್ ಮಹ್ಮದಾಪು ನಿಧನ
ಭಟ್ಕಳ: ಇಲ್ಲಿನ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸೈಟಿ ನ್ಯೂಶಮ್ಸ್ ಸ್ಕೂಲ್ ನ ಆಡಳಿತ ಮಂಡಳಿ ಸದಸ್ಯ ಹಬಿಬುಲ್ಲಾ ರುಕ್ನುದ್ದಿನ್ ಮಹ್ಮದಾಪು (ಅಲ್ಫಹದಿ ಮಾಲೇಕಾ) (80) ಬುಧವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು.
ಜಮಾಅತೆ ಇಸ್ಲಾಮಿ ಹಿಂದ್ ನ ಹಿತೈಷಿ ಆಗಿದ್ದ ಇವರು, ನವಾಯತ್ ಕಾಲನಿಯಲ್ಲಿರುವ ಅಲ್ ಫಹದಿ ಸ್ಟೋರ್ ಮಾಲಕರಾಗಿದ್ದರು. ಆರೋಗ್ಯವಂತರಾಗಿಯೇ ಇದ್ದ ಇವರಿಗೆ ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದು ಹೃದಯಘಾತವಾಗಿ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಇವರ ನಿಧನಕ್ಕೆ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಸ್ಕೂಲ್ ಬೋರ್ಡ್ ಚೇರ್ಮನ್ ಕಾದಿರ್ ಮೀರಾ ಪಟೇಲ್, ಕಾರ್ಯದರ್ಶಿ ಅನಂ ಅಲಾ ಎಂ.ಟಿ, ಜಮಾಅತೆ ಇಸ್ಲಾಮಿ ಭಟ್ಕಳ ಶಾಖೆಯ ಅಧ್ಯಕ್ಷ ಮುಜಾಹಿದ್ ಮುಸ್ತಫಾ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಭಟ್ಕಳದ ಜಾಮಿಯಾ ಮಸೀದಿಯಲ್ಲಿ ಗುರುವಾರ ಮಧ್ಯಾಹ್ನ ಇವರ ಜನಾಝಾ ನಮಾಝ್ ನಿರ್ವಹಿಸಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.