×
Ad

ಇಮ್ರಾನ್‍ ಖಾನ್ ಪದಚ್ಯುತಿಗೆ ವಿದೇಶಿ ಸಂಚು ಆರೋಪ; ಅಲ್ಲಗಳೆದ ಪಾಕಿಸ್ತಾನ ಸೇನೆ

Update: 2022-04-15 07:09 IST
ಇಮ್ರಾನ್‍ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ ಖಾನ್ ಆಪಾದಿಸಿದಂತೆ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ಆಡಳಿತವನ್ನು ಬದಲಾಯಿಸುವ ಸಂಬಂಧ ವಿದೇಶಿ ಸಂಚು ನಡೆದಿದೆ ಎಂಬ ಹೇಳಿಕೆಯನ್ನು ಪಾಕಿಸ್ತಾನ ಸೇನೆ ಅಲ್ಲಗಳೆದಿದೆ.

ಅಂತರರಾಷ್ಟ್ರೀಯ ಸಂಚುಗಳನ್ನು ಸಮರ್ಥವಾಗಿ ತಡೆಯುವ ಎಲ್ಲ ಸಾಮರ್ಥ್ಯ ಪಾಕಿಸ್ತಾನದ ಸಂಸ್ಥೆಗಳಿಗೆ ಇದೆ. ಆದರೆ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯ ನಡಾವಳಿಗಳಲ್ಲಿ "ಸಂಚು" ಪದದ ಯಾವುದೇ ಉಲ್ಲೇಖ ಇಲ್ಲ ಎಂದು ಸೇನಾ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಎನ್‍ಎಸ್‍ಸಿ ಸಭೆಗೆ ಸೇನಾ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ, ನಿಲುವನ್ನು ಸ್ಪಷ್ಟಪಡಿಸಲಾಗಿದೆ ಹಾಗೂ ಸಭೆಯಲ್ಲಿ ಯಾವ ನಿರ್ಣಯ ಕೈಗೊಳ್ಳಲಾಗಿದೆ ಎನ್ನುವುದನ್ನು ಇದು ತೋರಿಸುತ್ತದೆ ಎಂದರು. "ನಿಮ್ಮ ಎದುರು ಇರುವ ಶಬ್ದಗಳು ಸ್ಪಷ್ಟ. 'ಸಂಚು' ಎಂಬ ಪದ ಬಳಕೆಯಾಗಿದೆಯೇ ಎನ್ನುವುದು. "ಆದರೆ ನನ್ನ ಪ್ರಕಾರ ಇಲ್ಲ ಎನಿಸುತ್ತದೆ". ಸರ್ಕಾರ ಅಪೇಕ್ಷೆಪಟ್ಟರೆ ಎನ್‍ಎಸ್‍ಸಿ ಸಭೆಯ ನಡಾವಳಿಯ ವಿವರಗಳನ್ನು ರಹಸ್ಯ ಎಂದು ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಪಾಕಿಸ್ತಾನ ರಾಯಭಾರಿ ಅಮೆರಿಕಕ್ಕೆ ನೀಡಿರುವ ರಹಸ್ಯ ಸಂದೇಶ ಐಎಸ್‍ಐಗೆ ಕೂಡಾ ಲಭ್ಯವಾಗಿದ್ದು, ಇದನ್ನು ಎನ್‍ಎಸ್‍ಸಿ ಸಭೆಗೆ ವಿವರಿಸಲಾಗಿದೆ. ಕೇವಲ ಸಂಚುಗಳ ಬಗ್ಗೆ ಮಾತ್ರ ಸಂದೇಶ ರವಾನಿಸಿಲ್ಲ; ಬದಲಾಗಿ ಹಲವು ವಿಷಯಗಳ ಬಗ್ಗೆ ಕಳುಹಿಸಲಾಗಿದೆ. ಒಂದು ವೇಳೆ ಅದನ್ನು ನೀಡಿದ್ದರೂ, ಹಸ್ತಕ್ಷೇಪಕ್ಕೆ ಸಮ ಎನಿಸುವ ರಾಜತಾಂತ್ರಿಕವಲ್ಲದ ಭಾಷೆಗಾಗಿ ನೀಡಲಾಗಿದೆ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News